ಸ್ಯಾಂಡಲ್‌ವುಡ್ (Sandalwood) ನಟಿ ರಚನಾ ದಶರಥ್ (Rachana Dashrath) ಮತ್ತು ಲೋಕೇಶ್ ಬಸವಟ್ಟಿ (Lokesh Basavatti) ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಮದುವೆಯ (Wedding) ಡೇಟ್ ಅನೌನ್ಸ್ ಮಾಡುವ ಮೂಲಕ ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ನಟಿ ರಚನಾ ದಶರಥ್ ಮಾತನಾಡಿದ್ದಾರೆ.ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿರುವ ಕಾರಣ, ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಸಾಕಷ್ಟು ಜನ ಇದು ಲವ್ ಮ್ಯಾರೇಜ್ ಎಂದೇ ಭಾವಿಸಿದ್ದರು. ಆದರೆ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ನಟಿ ರಚನಾ ಹೇಳಿದ್ದಾರೆ. ಎಂಗೇಜ್‌ಮೆಂಟ್ ಬಳಿಕ ಮದುವೆ ಡೇಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಕೈಕೊಟ್ಟ ಅದೃಷ್ಟ: ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಔಟ್ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಗೌರಿಪುರದ ಗಯ್ಯಾಳಿಗಳು’ ಎಂಬ ಸೀರಿಯಲ್‌ನಲ್ಲಿ ರಚನಾ ಮತ್ತು ಲೋಕೇಶ್ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚನಾ ನಡೆ, ನುಡಿ ಇಷ್ಟವಾಗಿರುವ ಕಾರಣ ನಟ ಲೋಕೇಶ್ ತಂದೆ, ತಾಯಿ ಮದುವೆ ಬಗ್ಗೆ ಪ್ರಸ್ತಾಪಿಸಿದರಂತೆ ಆದರೆ ನಟಿ ರಚನಾ ನಾನು ನೇಪಾಳಿ ಕುಟುಂಬದ ಹುಡುಗಿ, ನೀವು ಲಿಂಗಾಯತರು ಬೇರೆ ಬೇರೆ ಜಾತಿಯಾಗುತ್ತದೆ. ಈ ವಿಚಾರದಲ್ಲಿ ನನ್ನ ಕುಟುಂಬದ (Family) ನಿರ್ಧಾರವೇ ಅಂತಿಮ ಎಂದಿದ್ದರು ರಚನಾ. ಬಳಿಕ ಎರಡು ಕುಟುಂಬಗಳು ಈ ಮದುವೆಯ ಬಗ್ಗೆ ಮಾತನಾಡಿ, ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಖುಷಿಯಿಂದಲೇ ಮದುವೆಗೆ ರಚನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಇದೀಗ ಲೋಕೇಶ್ ಅವರು ಮೂಲತಃ ಚಾಮರಾಜನಗರದ ಬಸವಟ್ಟಿ ಗ್ರಾಮದವರು. ಹಾಗಾಗಿ ಚಾಮರಾಜನಗರದ ಅನುಭವ ಮಂಟಪದಲ್ಲಿ (Anubava Mantapa) 2023, ಜನವರಿ 26, 27ರಂದು ಮದುವೆ ನಡೆಯಲಿದೆ. ನೇಪಾಳಿ ಮತ್ತು ಲಿಂಗಾಯತ ಪದ್ಧತಿ ಪ್ರಕಾರ ಮದುವೆ ಜರುಗಲಿದೆ. ಗುರುಹಿರಿಯರ ಸಮ್ಮುಖದಲ್ಲಿ ರಚನಾ ಮತ್ತು ಲೋಕೇಶ್ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಒಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ಹೊಸ ಜೋಡಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.ನಟಿ ರಚನಾ ದಶರಥ್ ಮದುವೆ ನಂತರವೂ ಚಿತ್ರರಂಗದಲ್ಲಿ  ಆಕ್ಟೀವ್‌ ಆಗಿರಲಿದ್ದಾರೆ. ಇನ್ನೂ ರಚನಾ ನಟಸಿರುವ `ಅಗ್ರಸೇನಾ’ ಮತ್ತು ಎಬಿ ಪಾಸಿಟಿವ್ ಚಿತ್ರಗಳು ತೆರೆಗೆ ಅಬ್ಬರಿಸಲು ರೆಡಿಯಾಗಿದೆ.ನಟನೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ಬಸವಟ್ಟಿ ನಟನಾ ಸಂಸ್ಥೆ ಸೇರಿದರು. ಕೆಲ ನಾಟಕಗಳಲ್ಲಿ ಅಭಿನಯಿಸಿದರು. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಲೋಕೇಶ್ ಬಸವಟ್ಟಿ ನಟಿಸಿದ್ದಾರೆ. ಪಾರ್ವತಿ ಪರಮೇಶ್ವರ ಸೀರಿಯಲ್‌ನಲ್ಲಿನ ಲಾಯರ್ ಗುಂಡಣ್ಣ ಪಾತ್ರ ಲೋಕೇಶ್ ಬಸವಟ್ಟಿ ಅವರಿಗೆ ಖ್ಯಾತಿ ತಂದುಕೊಡ್ತು. ಚತುರ್ಭುಜ, ಡಿಂಗ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಲೋಕೇಶ್ ಬಸವಟ್ಟಿ ಮಿಂಚಿದ್ದಾರೆ.ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 
Sign in to your account
Username or Email Address


Password

 Remember Me


