ಬಿಗ್ ಬಾಸ್ ಮನೆಯಲ್ಲಿ (Bigg Boss House) ಸೀಸನ್ 9ರಲ್ಲಿ ದಿವ್ಯಾ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ (Bigg Boss Grand Finale) ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ ಜಗಳ ಮಾಡಿಕೊಂಡಿದ್ದಾರೆ. ಅದೃಷ್ಟದಿಂದ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಇದ್ರೂ ಎಂದು ಸಂಬರ್ಗಿ ಟಾಂಗ್ ಕೊಟ್ಟಿದ್ದಾರೆ.ದೊಡ್ಮನೆಯ ಆಟ ಮುಗಿಯಲು ಕ್ಷಣಗಣನೆ ಶುರುವಾಗಿದೆ. ಈ ವೇಳೆ ಮನೆಯಿಂದ ಯಾರು ಹೊರಬೇಕು ಎಂದು ಸುದೀಪ್ (Kiccha Sudeep)  ಈಗಾಗಲೇ ಹೊರಬಂದಿರುವ ಸ್ಪರ್ಧಿಗಳಿಗೆ ಕೇಳಿದ್ದಾರೆ. ಹಾಗೆಯೇ ಸಂಬರ್ಗಿ ಅವರಿಗೂ ಕೇಳಿದ್ದಾರೆ. ಈ ವೇಳೆ ದಿವ್ಯಾ ಬಗ್ಗೆ ಖಾರವಾಗಿ ಸಂಬರ್ಗಿ ಪ್ರಶ್ನೆ ಮಾಡಿದ್ದಾರೆ.“ದಿವ್ಯಾ ಉರುಡುಗ ಅವರು ಇಷ್ಟುದಿನ ಇದ್ದಿದ್ದೆ ಹೆಚ್ಚು. ಅವರು ಏನೂ ಮಾಡದೆ ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಏನು ಮಾಡಿದ್ದಾರೆ ಎಂದು ಅವರನ್ನು ಅವರೇ ಕೇಳಿಕೊಳ್ಳಲಿ. ಇಷ್ಟು ದಿನ ದಿವ್ಯಾ ಹೆಜ್ಜೆ ಹಾಕಿದ್ದು ಅದೃಷ್ಟದಿಂದ ಮಾತ್ರ. ದಿವ್ಯಾ ಉರುಡುಗ ಅವರೇ ಮನೆಯಿಂದ ಹೊರಗಡೆ ಬರಬೇಕು, ಹೊರಗಡೆ ಬರುತ್ತಾರೆ” ಎಂದು ಖಾರವಾಗಿ ಹೇಳಿದ್ದರು. ಇದನ್ನು ಮನೆಯ ಒಳಗಡೆ ಇದ್ದಾಗಲೇ ಕೇಳಿಸಿಕೊಂಡ ದಿವ್ಯಾ ಉರುಡುಗ ಅವರು ಹೊರಗಡೆ ಬಂದು, ಕಿಚ್ಚ ಸುದೀಪ್ ಮುಂದೆ ನಿಂತು ಪ್ರಶಾಂತ್ ಸಂಬರಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ನಾನು ಅದೃಷ್ಟದಿಂದ ಬಿಗ್ ಬಾಸ್‌ನಲ್ಲಿ ಇಷ್ಟುದಿನ ಇಲ್ಲ. ನನ್ನನ್ನು ಜನರು ಇಷ್ಟಪಟ್ಟಿರೋದಿಕ್ಕೆ ಇಲ್ಲಿ ಇರೋದು, ಇಲ್ಲ ಅಂದ್ರೆ ಇರುತ್ತಿರಲಿಲ್ಲ. ದಿವ್ಯಾ ಅಂತ ಹೆಸರು ಬಂದ ಕೂಡಲೇ ನನ್ನ ಬಗ್ಗೆ ಏನೇನೋ ಮಾತನಾಡುತ್ತೀರಿ. ಪ್ರಶಾಂತ್ ಸಂಬರಗಿಯವರನ್ನು ನಾನೊಬ್ಬಳೇ ಹ್ಯಾಂಡಲ್ ಮಾಡಬಹುದಿತ್ತು. ಆದರೆ ಸಂಬರಗಿಗೆ ಉಳಿದ ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡೋದು ಕಷ್ಟ ಆಗಿತ್ತು. ಹಾಗಾಗಿ ನನಗೆ ಈ ಸಲ ಸ್ವಲ್ಪ ಹೊಂದಿಕೊಳ್ಳೋದು ಕಷ್ಟ ಆಗಿರಬಹುದು. ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕೇಳಿದಾಗ ಪ್ರಶಾಂತ್ ಸಂಬರಗಿ ಅವರು ಬೇರೆಯವರು ಕೂಡ ನನ್ನ ಹೆಸರು ಹೇಳಬೇಕು ಅನ್ನೋ ತರ ಮಾತನಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಜೊತೆಗಿನ `ಕಿರಿಕ್ ಪಾರ್ಟಿ’ ಚಿತ್ರ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣಇನ್ನೂ ದಿವ್ಯಾ ಉರುಡುಗ (Divya Uruduga) ಎಲಿಮಿನೇಷನ್ (Elimination) ನಂತರ ರೂಪೇಶ್ ಶೆಟ್ಟಿ, ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ ನಡುವೆ ಪೈಪೋಟಿ ಮುಂದುವರೆದಿದೆ. ಯಾರಾಗಲಿದ್ದಾರೆ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಎಂದು ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


