ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್, ಬಾಲಿವುಡ್‌ನಲ್ಲಿ ನೆಲೆ ನಿಲ್ಲಲು ಕಾರಣವಾಗಿರೋದು `ಕಿರಿಕ್ ಪಾರ್ಟಿ'(Kirik Party) ಸಿನಿಮಾ. ಇದೀಗ ಈ ಚಿತ್ರಕ್ಕೆ 6 ವರ್ಷಗಳನ್ನ ಪೂರೈಸಿದೆ. ಸಾಕಷ್ಟು ವಿವಾದಗಳ ಬೆನ್ನಲ್ಲೇ ತಮ್ಮ ಕಿರಿಕ್ ಪಾರ್ಟಿ ಸಿನಿಮಾ ಜರ್ನಿಯನ್ನ ರಶ್ಮಿಕಾ ಮಂದಣ್ಣ ನೆನಪು ಮಾಡಿಕೊಂಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.ರಕ್ಷಿತ್ ಶೆಟ್ಟಿ(Rakshith Shetty), ರಶ್ಮಿಕಾ ಮಂದಣ್ಣ ಅವರ ನಟನೆಯ `ಕಿರಿಕ್ ಪಾರ್ಟಿ’ ಡಿ.30, 2016ರಲ್ಲಿ ತೆರೆಕಂಡಿತ್ತು. ಸೂಪರ್ ಡೂಪರ್ ಆಗಿ ಸಿನಿಮಾ ಸಕ್ಸಸ್ ಕಂಡಿತ್ತು. ಸಾನ್ಯ ಮತ್ತು ಕರ್ಣನ ಲವ್ ಸ್ಟೋರಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಪರಭಾಷೆಯಲ್ಲಿ ಬ್ಯುಸಿ ಆದರು. ಕೆಲವು ಕಡೆಗಳಲ್ಲಿ ಅವರು ಕನ್ನಡವನ್ನು, ಮೊದಲ ಚಿತ್ರವನ್ನು ಕಡೆಗಣಿಸಿದ್ದಿದೆ. ಇದರಿಂದ ಅನೇಕರ ಕೋಪಕ್ಕೆ ಅವರು ಕಾರಣರಾದರು. ಈ ವಿಚಾರಕ್ಕೆ ಒಂದು ವರ್ಗದ ಜನರು ರಶ್ಮಿಕಾ ಅವರನ್ನು ದ್ವೇಷ ಮಾಡಲು ಆರಂಭಿಸಿದರು. ಬ್ಯಾನ್ (Ban) ಮಾಡಲೇಬೇಕು ಎಂಬ ಹಂತಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಭಟನೆ ಮಾಡಿದ್ದರು. ಈಗ ರಶ್ಮಿಕಾ `ಕಿರಿಕ್ ಪಾರ್ಟಿ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಸಾನ್ಯನ ತಬ್ಬಿಕೊಳ್ತೀನಿ: ರೂಪೇಶ್‌ ಶೆಟ್ಟಿ`ಕಿರಿಕ್ ಪಾರ್ಟಿ’ಗೆ ಆರು ವರ್ಷ. ಎಲ್ಲವೂ ಆರಂಭವಾದ ದಿನ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಜತೆಗೆ ಕಿರಿಕ್ ಪಾರ್ಟಿ ಪೋಸ್ಟರ್ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಸ್ಟೇಟಸ್‌ನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.ರಶ್ಮಿಕಾ ನಡೆ ನೋಡಿ ಅನೇಕ ಅಭಿಮಾನಿಗಳು ಕೆಟ್ಟ ಮೇಲೆ ಬುದ್ಧಿ ಬಂತಾ. ಈಗ ನಿಮ್ಮ ಮೊದಲ ಸಿನಿಮಾ ನೆನಪಾಯ್ತಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Sign in to your account
Username or Email Address


Password

 Remember Me


