`ಕಾಂತಾರ’ (Kantara) ಸೂಪರ್ ಸ್ಟಾರ್ ರಿಷಬ್ ಶೆಟ್ಟಿಗೆ ದೇಶದ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ಕಾಂತಾರ ಸಿನಿಮಾದಲ್ಲಿನ ರಿಷಬ್ ನಿರ್ದೇಶನ, ನಟನೆ ನೋಡಿ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಅನೇಕ ಸ್ಟಾರ್ ನಟ-ನಟಿಯರು ರಿಷಬ್ ಶೆಟ್ಟಿ (Rishab Shetty) ಜೊತೆ ಸಿನಿಮಾ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಅನೇಕರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಜಾನ್ವಿ ಕಪೂರ್ ರಿಷಬ್ ಜೊತೆ ಸಿನಿಮಾ ಮಾಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್ಸ್ಟಾರ್ ನಟಿ ಜಾನ್ವಿ ಕಪೂರ್ (Janhavi Kapoor) ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಜಾನ್ವಿ ರಿಷಬ್ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿರುವ ಜಾನ್ವಿ ಕಪೂರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ತುಂಬಾ ಇಷ್ಟಪಡುತ್ತೇನೆ. `ಕಾಂತಾರ’ ಕೊನೆಯ 30 ನಿಮಿಷಗಳು ಅವರು ಏನು ಮಾಡಿದ್ದಾರೆ ಎಂಬುದು ಸಿನಿಮಾನೇ ತೋರಿಸಿ ಕೊಟ್ಟಿದೆ. ಕಾಂತಾರ ತುಂಬಾ ವಿಭಿನ್ನವಾಗಿದೆ. ಆ ಸ್ಥಳ, ಸಮುದಾಯ, ಧಾರ್ಮಿಕ ಪದ್ಧತಿ, ಪ್ರತಿಯೊಬ್ಬರೂ ರಿಲೇಟ್ ಆಗಲು ಸಾಧ್ಯವಾಯಿತು. ಏಕೆಂದರೆ ತಮ್ಮ ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ನಿಖರವಾಗಿ ಚಿತ್ರಸಿದ್ದಾರೆ ಎಂದು ಹೇಳಿದ್ದಾರೆ.ರಿಷಬ್ ಮಾತ್ರವಲ್ಲದೇ ಜಾನ್ವಿ ಸೌತ್ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸೌತ್ ಕನೆಕ್ಷನ್ ಹೊಂದಿರುವ ನಟಿ ಜಾನ್ವಿ ಹೆಚ್ಚಾಗಿ ಹೈದರಾಬಾದ್‌ನಲ್ಲಿ ಇರುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಜಾನ್ವಿ ತೆಲುಗು ಸ್ಟಾರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ನಟ ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಜೊತೆ ನಟಿಸಬೇಕೆಂದು ಹೇಳಿದ್ದಾರೆ. ಈ ವೇಳೆ ನಟ ರಿಷಬ್ ಶೆಟ್ಟಿ ಜೊತೆಯೂ ಕೆಲಸ ಮಾಡಬೇಕೆಂದು ಜಾನ್ವಿ ಕಪೂರ್ ಬಹಿರಂಗ ಪಡಿಸಿದ್ದಾರೆ.ಕಾಂತಾರ ಸಿನಿಮಾ ಸಕ್ಸಸ್‌ ನಂತರ ಇದೀಗ ಬಿಟೌನ್‌ ಸ್ಟಾರ್ಸ್‌ ಕನ್ನಡ ಚಿತ್ರರಂಗದತ್ತ ಬರುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.
Sign in to your account
Username or Email Address


Password

 Remember Me


