ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ (Tollywood) ಇತ್ತೀಚೆಗೆ ಸಂಚಲನ ಮೂಡಿಸಿದ ವಿಚಾರ ಅಂದರೆ ಪವಿತ್ರಾ (Pavitra) ಮತ್ತು ನರೇಶ್ (Actor Naresh) ಲವ್ವಿ -ಡವ್ವಿ ವಿಚಾರ. ಇದೀಗ ಹೊಸ ವರ್ಷ ಬರುವಿಕೆಯ ಸಂಭ್ರಮದ ವೇಳೆ ತಮ್ಮ ಮದುವೆ ಬಗ್ಗೆ ಈ ಜೋಡಿ ಅನೌನ್ಸ್ ಮಾಡಿದ್ದಾರೆ.ಟಾಲಿವುಡ್ ನಟ ನರೇಶ್, ರಮ್ಯಾ ದಾಂಪತ್ಯ ಜೀವನದ ವಿಚಾರ ಬಗ್ಗೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಸಂಸಾರದ ಜಗಳ ಬೀದಿಗೆ ಬಂದು ಸದ್ದು ಮಾಡಿತ್ತು. ಪವಿತ್ರಾ ಲೋಕೇಶ್ (Pavitra Lokesh) ಮತ್ತು ನರೇಶ್ ರಿಲೇಷನ್‌ಶಿಪ್ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಎಲ್ಲಾ ವಿವಾದಕ್ಕೂ ಪವಿತ್ರಾ, ನರೇಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಪ್ತಪದಿ ತುಳಿಯಲು ಈ ಜೋಡಿ ಸಜ್ಜಾಗಿದ್ದಾರೆ.New Year ✨
New Beginnings ????
Need all your blessings ????From us to all of you #HappyNewYear ❤️– Mee #PavitraNaresh pic.twitter.com/JiEbWY4qTQ— H.E Dr Naresh VK actor (@ItsActorNaresh) December 31, 2022ಕೇಕ್ ಕಟ್ ಮಾಡಿ, ಸಿಹಿ ಚುಂಬನ ನೀಡುವ ಮೂಲಕ ಯೆಸ್ ನಾವು ಮದುವೆಯಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ ನರೇಶ್ ಅನೌನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮದುವೆ ಎಂದು ತಿಳಿಸಿದ್ದಾರೆ.ಮದುವೆ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ನರೇಶ್, ಪವಿತ್ರಾಗೆ ಶುಭಹಾರೈಸುತ್ತಿದ್ದಾರೆ.
Sign in to your account
Username or Email Address


Password

 Remember Me


