ಬಿಗ್ ಬಾಸ್ (Bigg Boss) ಸೀಸನ್ 9ಕ್ಕೆ ಆರ್ಯವರ್ಧನ್ ಗುರೂಜಿ (Aryavardhan) ಕಾಲಿಟ್ಟಿದ್ದರು. ಟಾಸ್ಕ್, ಮನರಂಜನೆ, ಅಡುಗೆ ಅಂತಾ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಆದರೆ ಫಿನಾಲೆ ಅಂತಿಮ ಘಟ್ಟದಲ್ಲಿರುವಾಗ ಮಿಡ್ ನೈಟ್ ಎಲಿಮಿನೇಟ್ ಆಗಿ ಹೊರಬಂದರು. ಈಗ ದೊಡ್ಮನೆಗೆ ಎಂಟ್ರಿ ಕೊಡಲು ಸುದೀಪ್ ಸರ್ ಸಂಭಾವನೆ (Kiccha Sudeep) ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಆರ್ಯವರ್ಧನ್ ಗುರೂಜಿ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.ಆರ್ಯವರ್ಧನ್ ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡರಲ್ಲೂ ಆಕ್ಟೀವ್ ಆಗಿದ್ದರು. ಬಾಡಿ ಶೇಮಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಎಲ್ಲದರಲ್ಲೂ ಮುಂದಿರುತ್ತಿದ್ದರು. ಇತ್ತೀಚೆಗೆ ನಡುರಾತ್ರಿ ಎಲಿಮಿನೇಷನ್ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿತ್ತು. ಫಿನಾಲೆ ಬಾಗಿಲಿಗೆ ಕದ ತಟ್ಟುವ ಮುನ್ನವೇ ಗುರೂಜಿ ಹೊರಬಂದರು. ಈಗ ಬಿಗ್ ಬಾಸ್‌ಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಗುರೂಜಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ ಸುರೇಶ್ಕಳೆದ 8 ಸೀಸನ್‌ನಿಂದ ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬರುತ್ತಿತ್ತು. ಆದರೆ ಎಲ್ಲಿ ಈ ಶೋಗೆ ಹೋದರೆ ನನ್ನ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತೆ ಎಂದು ಹೆದರಿ ಹೋಗಿರಲಿಲ್ಲ. ಆದರೆ ಈ ಬಾರಿ ವಾಹಿನಿ ಮುಖ್ಯಸ್ಥ ಪರವೇಶ್ವರ್ ಗುಂಡ್ಕಲ್ ಮಾತಿಗೆ ಬೆಲೆ ಕೊಟ್ಟು ಹೋಗಿದ್ದೆ. ಇನ್ನೂ ಬಿಗ್ ಬಾಸ್ ಮನೆಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ್ದೆ. ಬಿಗ್ ಬಾಸ್ ಟೀಮ್ ಈ ಬಗ್ಗೆ ಗಾಬರಿಯಾಗಿದ್ದರು. ಕೊನೆಗೆ ಎಲ್ಲರಿಗಿಂತ ಕಮ್ಮಿ ಪೇಮೆಂಟ್‌ಗೆ ಒಪ್ಪಿಕೊಂಡು ಹೋದೆ ಎಂದು ಗುರೂಜಿ ಹೇಳಿದ್ದಾರೆ.ಇನ್ನೂ ಈ ಬಾರಿ ಬಿಗ್ ಬಾಸ್ ಪಟ್ಟವನ್ನ ನನ್ನ ಮಗ ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂದು ಆಶಿಸುತ್ತೇನೆ. ಅವರೇ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


