ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ (Ramya) ಹೊಸ ವರ್ಷ ಅದ್ದೂರಿಯಾಗಿ ಸ್ವಾಗತಿಸಲು ಲಂಡನ್‌ಗೆ (London) ಹಾರಿದ್ದಾರೆ. ಪದ್ಮಾವತಿಗೆ ಸಾಥ್ ಕೊಡಲು ಅಮೃತಾ ಅಯ್ಯಂಗಾರ್ (Amrutha Iyengar) ಕೂಡ ಬಂದಿದ್ದಾರೆ. ಇದೀಗ ರಮ್ಯಾ, ಅಮೃತಾ ಇಬ್ಬರ ಮಸ್ತ್ ಮಸ್ತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  A post shared by Ramya|Divya Spandana (@divyaspandana)ನಟಿ ರಮ್ಯಾ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. ಹೀಗಿರುವಾಗ ಹೊಸ ವರ್ಷ ಸಂತಸದಿಂದ ಬರಮಾಡಿಕೊಳ್ಳಲು ನಟಿ ಅಮೃತಾ ಜೊತೆ ಲಂಡನ್‌ಗೆ ಹಾರಿದ್ದಾರೆ. ದೂರದ ದೇಶ ಲಂಡನ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾ ಎಂಜಾಯ್‌ ಮಾಡ್ತಿದ್ದಾರೆ. ಈಗ ಲಂಡನ್ ಪ್ರವಾಸದಲ್ಲಿ ಮಸ್ತ್ ಮಜಾ ಮಾಡುತ್ತಿರುವ ಈ ಇಬ್ಬರ ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು  A post shared by Amy❤️ (@amrutha_iyengar)ಇನ್ನೂ ರಮ್ಯಾ ಮತ್ತು ಡಾಲಿ (Dhananjay) ನಟನೆಯ `ಉತ್ತರಾಕಾಂಡ’ (Uttarakanda) ಸಿನಿಮಾ 2023ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
Sign in to your account
Username or Email Address


Password

 Remember Me


