ಮಂಡ್ಯ: ನಮ್ಮ ಬಿಜೆಪಿ (BJP) ಸರ್ಕಾರ ಮಂಡ್ಯದ (Mandya) ಜನತೆಗೆ ಏನು ಕಡಿಮೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಪ್ರಶ್ನಿಸಿದ್ದಾರೆ.ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಬಿಟ್ಟು ಇಂಡಿಯಾ ಇಲ್ಲ, ಇಂಡಿಯಾ ಬಿಟ್ಟು ಮಂಡ್ಯ ಇಲ್ಲ. ಕೆಲವರಿಗೆ ರಾಜಕೀಯ ಮರುಹುಟ್ಟು ಕೊಟ್ರಿ, ಕೆಲವರ ಬೆನ್ನಿಗೆ ನಿಂತಿರಿ. ಹಾಗಂತ ಮಂಡ್ಯ ಯಾರ ಜಹಾಗೀರು ಅಲ್ಲ. ಮಂಡ್ಯ ಜನ ಸ್ವಾಭಿಮಾನಗಳು ಎಂಬ ಸಂದೇಶ ರವಾನೆಯಾಗಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿಜಾತಿ ನೋಡಿ ಯೋಜನೆ ಕೊಟ್ಟಿಲ್ಲ:
ಬಿಜೆಪಿ ಸರ್ಕಾರ (BJP Government) ಮಂಡ್ಯಕ್ಕೆ ಏನು ಕಡಿಮೆ ಮಾಡಿದೆ ಹೇಳಿ? ಹಾಲಿಗೆ ಸಹಾಯಧನ ಕೊಟ್ಟಿದ್ದು ಕಾಂಗ್ರೆಸ್ (Congress) ಅಲ್ಲ. ಯಡಿಯೂರಪ್ಪ ಅವರ ಸರ್ಕಾರ. ನಮ್ಮ ಸರ್ಕಾರ ಜಾತಿ (Caste) ನೋಡಿ ಯಾವ ಯೋಜನೆ ಕೊಟ್ಟಿಲ್ಲ. ಎಲ್ಲಾ ಬಡವರ ಕಲ್ಯಾಣಕ್ಕೆ ಯೋಜನೆ ಕೊಟ್ಟಿದ್ದೇವೆ. ನಾನು ನಿಮ್ಮ ಬಳಿ ನ್ಯಾಯ ಕೇಳಲು ಬಂದಿದ್ದೇನೆ. ನಮ್ಮ ಸರ್ಕಾರದ ಯೋಜನೆಗಳನ್ನು ಹೇಳಿ ನಿಮ್ಮ ಬಳಿ ಇಟ್ಟು ನ್ಯಾಯ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.ಈ ಬಾರಿಯ ಚುನಾವಣೆ ಮೂಡಲಬಾಗಿಲು ಹನುಮಪ್ಪ – ಮುಲ್ಲಾ ಸಾಬಿ ನಡುವಿನ ಚುನಾವಣೆ, ಟಿಪ್ಪು ವರ್ಸಸ್ ಒಡೆಯರ್ ನಡುವಿನ ಚುನಾವಣೆ. ನಿಮ್ಮ ವೋಟ್ ಹನುಮಪ್ಪನಿಗೆ ನ್ಯಾಯ ಕೊಡೋಕೆ ಹಾಕಬೇಕು. ಮುಂದಿನ ಜನ್ಮದಲ್ಲಿ ಅದೇ ಆಗಿ ಹುಟ್ಟುತ್ತೇನೆ ಅನ್ನುವವರಿಗೂ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷ್ಣಾ ನದಿ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ಕೊಡ್ತೇವೆ – ಸುರ್ಜೆವಾಲಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು ಅಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ. ಆದ್ರೆ ಕೆಲವರು ಟಿಪ್ಪು (Tipu Sultan) ನಮ್ಮಪ್ಪನಿಗಿಂತಾ ಅನ್ನೋ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಪಾಲಿನ ಭಾಗ್ಯಧಾತ ನಾಲ್ವಡಿ ಕೃಷ್ಣರಾಜ ಒಡೆಯರ್. ಟಿಪ್ಪುವನ್ನು ಅಟ್ಟಾಡಿಸಿ ಕೊಂದವರು ಸ್ವಾಭಿಮಾನಿ ಉರಿಗೌಡ, ದೊಡ್ಡ ನಂಜೇಗೌಡ. ಅವರಿಬ್ಬರು ನಿಜವಾದ ಹುಲಿಗಳು. ಅವರ ಪ್ರತಿಮೆ ನಿರ್ಮಾಣವಾಗಬೇಕು, ಅದನ್ನು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್ಯಾವುದು ತ್ಯಾಗ?
ಚುನಾವಣೆಯಲ್ಲಿ ಯಾವುದು ತ್ಯಾಗ? ಅಜ್ಜ ಮೊಮ್ಮಗನಿಗೆ ಸೀಟು ಬಿಟ್ಟುಕೊಟ್ರೆ ತ್ಯಾಗನಾ? ಅವ್ವ ಮಗನಿಗೆ ಸೀಟು ಬಿಟ್ಟುಕೊಟ್ಟರೆ ಅದು ತ್ಯಾಗನಾ? ಇವರದ್ದು ತ್ಯಾಗ ಅಲ್ಲ, ಸ್ವಾರ್ಥ. ಮಂಡ್ಯ ಯಾರ ಜಹಾಗೀರ್ ಕೂಡ ಅಲ್ಲ ಅನ್ನೋದು ಫ್ರೂವ್ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
Sign in to your account
Username or Email Address


Password

 Remember Me


