`ಕಿಸ್’ ಮತ್ತು `ಭರಾಟೆ’ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಸುಂದರಿ ಶ್ರೀಲೀಲಾ, ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ (Rashmika Mandanna) ನಂತರ ಶ್ರೀಲೀಲಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇತ್ತೀಚೆಗೆ ಧಮಾಕ ಪ್ರಚಾರ ಕಾರ್ಯದಲ್ಲಿ `ಕಾಂತಾರ’ (Kantara) ನಮ್ಮ ಕನ್ನಡದ ಹೆಮ್ಮೆ ಎಂದು ನಟಿ ಶ್ರೀಲೀಲಾ (Sreeleela) ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.ಕನ್ನಡದ ನಟಿ ಶ್ರೀಲೀಲಾ ಈಗ ಸೌತ್ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ತೆಲುಗಿನಲ್ಲಿ ಮಿಂಚ್ತಾ ಇದ್ದರು. ಕನ್ನಡ ಚಿತ್ರರಂಗದ ಮೇಲೆ ಅಗಾಧವಾದ ಪ್ರೀತಿಯನ್ನ ಹೊಂದಿದ್ದಾರೆ. ಸದ್ಯ ರವಿತೇಜಾ ಮತ್ತು ಶ್ರೀಲೀಲಾ ನಟನೆಯ `ಧಮಾಕ’ (Dhamaka)ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಲೀಲಾಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. `ಕಾಂತಾರ’ ಸಿನಿಮಾ ಬಗ್ಗೆಯೂ ಕೇಳಲಾಗಿದೆ. ಇದನ್ನೂ ಓದಿ: ಫಿಶ್ ತಿನ್ನುವ ಭರದಲ್ಲಿ ʻಸಾನ್ಯ ಅಂದ್ರೆ ಯಾರುʼ ಎಂದ ರೂಪೇಶ್‌ ಶೆಟ್ಟಿನಾನು `ಕಾಂತಾರ’ ಸಿನಿಮಾ ನೋಡಿದ್ದೇನೆ. ಚಿತ್ರ ಅದ್ಭುತವಾಗಿದೆ. ನಾನು ಕರ್ನಾಟಕದವಳು(Karnataka). ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಇದೆ. ಕಾಂತಾರ ನಮ್ಮ ಕನ್ನಡದ ಹೆಮ್ಮೆ ಎಂದು ಈ ವೇಳೆ ಶ್ರೀಲೀಲಾ ಮಾತನಾಡಿದ್ದಾರೆ. ನಟಿ ಆಡಿರುವ ಮಾತು ಇದೀಗ ಕನ್ನಡಿಗರ ಮನಗೆದ್ದಿದೆ. ರಶ್ಮಿಕಾ ಮಾಡಿದ ತಪ್ಪನ್ನ ಮಾಡದೇ, ಕನ್ನಡ ಚಿತ್ರರಂಗದ ಬಗ್ಗೆ ಶ್ರೀಲೀಲಾ ಹೆಮ್ಮೆಯಿಂದ ಮಾತನಾಡಿದ್ದಕ್ಕೆ ಕನ್ನಡಿಗರು ದಿಲ್‌ಖುಷ್ ಆಗಿದ್ದಾರೆ.`ಪೆಳ್ಳಿ ಸಂದಡಿ’ ಮತ್ತು `ಧಮಾಕ’ ನಂತರ ತೆಲುಗಿನ ಸಾಕಷ್ಟು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Sign in to your account
Username or Email Address


Password

 Remember Me


