ಕನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್‌ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
Sign in to your account
Username or Email Address


Password

 Remember Me


