ಕೋಲಾರ: ಹಿರಿಯ ಪತ್ರಕರ್ತ (Senior Journalist) ಹಾಗೂ ಸಾಹಿತಿ ಎಂ.ಎಸ್ ಪ್ರಭಾಕರ್ (87) ನಿಧನರಾಗಿದ್ದಾರೆ.ಕೋಲಾರ ಮೂಲದ ಕಾಮರೂಪಿ ಎಂ.ಎಸ್.ಪ್ರಭಾಕರ್ ಅವರು ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿದ್ದರು. ಕೋಲಾರ (Kolar) ನಗರದ ಕಠಾರಿ ಪಾಳ್ಯದಲ್ಲಿ ಇಂದು ಕೊನೆಯುಸಿರೆಳೆದರು.ಲಂಕೇಶ್ ಸೇರಿದಂತೆ ಹಿರಿಯ ಪತ್ರಕರ್ತರೊಂದಿಗೆ ಪ್ರಭಾಕರ್ ಒಡನಾಡಿಯಾಗಿದ್ದರು. ಅಸ್ಸಾಂ ನಲ್ಲಿ ಪತ್ರಿಕೋದ್ಯಮ ಆರಂಭ ಮಾಡಿದ್ದ ಇವರು, ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನ ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ತುಂಬಾ ಕಡಿಮೆ ಪುಸ್ತಕ ಬರೆದಿದ್ದರೂ ಹಲವು ಓದುಗರನ್ನ ಹೊಂದಿದ್ದ ಹಿರಿಯ ಸಾಹಿತಿಯಾಗಿದ್ದಾರೆ. 2021 ರಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿ ಪಡೆದಿದ್ರು. ಸದ್ಯ ಅವರ ಇಚ್ಛೆಯಂತೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.
Sign in to your account
Username or Email Address


Password

 Remember Me


