ಬಿಗ್ ಬಾಸ್ ಮನೆಯಲ್ಲಿ (Bigg Boss House) ಗ್ರ‍್ಯಾಂಡ್ ಫಿನಾಲೆಗೆ (Grand Finale) ದಿನಗಣನೆ ಶುರುವಾಗಿದೆ. ಕೊನೆಯ ವಾರವಾದ್ದರಿಂದ, ಎಲ್ಲಾ ಸ್ಪರ್ಧಿಗಳಿಗೂ ಬಿಗ್ ಬಾಸ್ ವಿಶೇಷ ಅವಕಾಶವನ್ನು ಕಲ್ಪಿಸಿದ್ದರು. ಸ್ಪರ್ಧಿಗಳ ಆಸೆಗಳ ಪೈಕಿ ಒಂದನ್ನು ಈಡೇರಿಸಲು ಬಿಗ್ ಬಾಸ್ ಭರವಸೆ ಕೊಟ್ಟಿದ್ದರು. ಇದೀಗ ಅದರಂತೆಯೇ ಸ್ಪರ್ಧಿಗಳ ಆಸೆಯನ್ನ ಬಿಗ್ ಬಾಸ್ ಈಡೇರಿಸಿದ್ದಾರೆ.ಫಿನಾಲೆಯ ಅಂತಿಮ ಘಟ್ಟವಾಗಿದ್ದ ಕಾರಣ ಸ್ಪರ್ಧಿಗಳ ಆಸೆ ಈಡೇರಿಸುವುದಾಗಿ ಹೇಳಿದ್ದರು. ಆಶಾಬಾವಿ ಮುಂದೆ ನಿಂತು ಬಿಗ್ ಬಾಸ್ ಬಳಿ ಸ್ಪರ್ಧಿಗಳು ತಮ್ಮ ಮೂರು ಆಸೆಗಳನ್ನ ಹೇಳಬೇಕಿತ್ತು. ಈಗ ಅವರ ಆಸೆಯಂತೆ ಬಿಗ್ ಬಾಸ್ ನೆರವೇರಿಸಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಮನವಿಯಂತೆ ದೊಡ್ಮನೆಗೆ ಹುಲಿವೇಷ ತಂಡವೇ ಎಂಟ್ರಿ ಕೊಟ್ಟಿದೆ. ರೂಪೇಶ್ ಶೆಟ್ಟಿ ಕೂಡ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ಚಆರ್ಯವರ್ಧನ್ ಔಟ್: ರಂಪಾಟ ಮಾಡಿ ಕಣ್ಣೀರಾಕಿದ ರೂಪೇಶ್ ಶೆಟ್ಟಿರೂಪೇಶ್ ಶೆಟ್ಟಿ ಅವರ ಹುಲಿಕುಣಿತದ ಆಸೆಯನ್ನ ಬಿಗ್ ಬಾಸ್ (Bigg Boss) ಈಡೇರಿಸಿದರು. ಹುಲಿವೇಷದ ಕಲಾವಿದರನ್ನ ಒಳಗೆ ಕಳುಹಿಸಿದ್ದರು ಬಿಗ್ ಬಾಸ್. ಮೊದಲು ಹುಲಿವೇಷದ ಕಲಾವಿದರೊಬ್ಬರು ಎಂಟ್ರಿ ಕೊಟ್ಟಾಗ ರಾಕೇಶ್ ಅಡಿಗ ಗಾಬರಿಗೊಂಡರು. ಆನಂತರ ಹುಲಿವೇಷದ ಕಲಾವಿದರು ಲೈವ್ ಪರ್ಫಾಮೆನ್ಸ್ ಕೊಡಲು ಆರಂಭಿಸಿದಾಗ ರೂಪೇಶ್ ಶೆಟ್ಟಿ ಕೂಡ ಹುಲಿಕುಣಿತ ಹಾಕಿ ಸಖತ್ ಖುಷಿ ಪಟ್ಟರು. ಖುಷಿಯಿಂದ ರೂಪೇಶ್ ಶೆಟ್ಟಿ ಕೂಗಾಡಿದರು. ಹುಲಿವೇಷ ತಂಡದ ಜೊತೆ ರೂಪೇಶ್ ಜೋಶ್‌ನಿಂದ ಕುಣಿಯುವಾಗ ಇತರೆ ಸ್ಪರ್ಧಿಗಳು ಕೂಡ ಸಾಥ್ ನೀಡಿದ್ದರು.ಹುಲಿವೇಷದ ಕಲಾವಿದರು ಹೊರಗಡೆ ಹೋದ ಬಳಿಕ ಈ ಆಸೆ ಈಡೇರಲ್ಲ ಅಂದುಕೊಂಡಿದ್ದೆ. ಆದರೆ, ಇಲ್ಲಿ ಆಗಿದ್ದು ಸಖತ್ ಖುಷಿಯಾಯಿತು. ಹುಲಿವೇಷದ ಕಲಾವಿದರು ಎಂಟ್ರಿ ಕೊಟ್ಟಿದ್ದು ಖುಷಿ ಆಯ್ತು ನನಗೆ ಎಂದರು ರೂಪೇಶ್ ಶೆಟ್ಟಿ. ಬಳಿಕ ಬಿಗ್‌ ಬಾಸ್‌ಗೆ ಧನ್ಯವಾದಗಳನ್ನ ತಿಳಿಸಿದರು.
Sign in to your account
Username or Email Address


Password

 Remember Me


