ರಾಯಚೂರು: ರಾಮನಿಗೂ (Rama) ಸಚಿವ ಅಶ್ವಥ್ ನಾರಾಯಣಗೂ (Dr. Ashwathnarayan) ಏನು ಸಂಬಂಧ, ಅಶ್ವಥ್ ನಾರಾಯಣ ತುಂಬಾ ಮಾತನಾಡುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D Devegowda) ಕಿಡಿಕಾರಿದ್ದಾರೆ.ರಾಯಚೂರಿನ ಮಾನ್ವಿಯಲ್ಲಿ ಶಾಸಕ ವೆಂಕಟಪ್ಪ ನಾಯಕ್ ಸಹೋದರನ ಮದುವೆ, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತೀವಿ ಅನ್ನೋ ವಿಚಾರದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಅಶ್ವಥ್ ನಾರಾಯಣ ಬಗ್ಗೆ ಅವರ ವಿಚಾರಗಳ ಬಗ್ಗೆ ವಿಧಾನಸೌಧದಲ್ಲಿ ಸಾಕಷ್ಟು ಚರ್ಚೆ ಆಗಿವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲುನಿಖಿಲ್ ಕುಮಾರಸ್ವಾಮಿ (Nikhil Kumaraswamy) ಎಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅನ್ನೋ ವಿಚಾರವಾಗಿ ಮಾತನಾಡಿ, ಜನ ಈ ಬಗ್ಗೆ ತಿರ್ಮಾನ ಮಾಡ್ತಾರೆ. ಅವನಿಗೆ B ಫಾರ್ಮ್ ಕೊಡುವವನು ನಾನು. ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಾನೆ, ಕನಕಪುರ ಅದೆಲ್ಲಾ ಊಹಾಪೋಹಗಳು. ಜನ ಪ್ರೀತಿಯಿಂದ ಹೇಳುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿಚುನಾವಣೆ ಮುಂದೆ ಇಟ್ಟುಕೊಂಡೆ ಈ ವಯಸ್ಸಿನಲ್ಲಿ ಓಡಾಡುತ್ತಿದ್ದೇನೆ. ಇಲ್ಲಿವರೆಗೆ ಏನೇನು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳಬೇಕಿದೆ. ಹಾಗಾಗಿ ಪಂಚರತ್ನ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಯೋಜನೆಗಳನ್ನು ಜನರ ಮುಂದೆ ಇಟ್ಟಿದ್ದೀವಿ. ಕುಮಾರಸ್ವಾಮಿಗೆ ತುಮಕೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಇದೆ. ನನಗೆ ಮಾನ್ವಿ ತಾಲೂಕಿಗೆ ಹೋಗಬೇಕು. ಇಲ್ಲಿಗೆ ಬರಲೇ ಬೇಕು ಅಂತ ಬಂದಿದ್ದೇನೆ. ನಿಖಿಲ್ ಬರಬೇಕಿತ್ತು, ಬೇರೆ ಕಾರಣದಿಂದ ಬರಲು ಆಗಲಿಲ್ಲ ಎಂದು ತಿಳಿಸಿದ್ದಾರೆ.
Sign in to your account
Username or Email Address


Password

 Remember Me


