ಮಡಿಕೇರಿ: ಆಸ್ತಿ (Property) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನಕ್ಕೂ ಮುಂದಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು‌, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್‌ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಪೆಟ್ಟುಯಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ. ಆದರೆ ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡೇಟು ಬಿದ್ದಿದೆ. ಜೀಪಿನ ಸೀಟನ್ನು ಸೀಳಿದೆ. ಆದರೆ ತೀಥ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ.ಘಟನೆಯೇನು?: ಬಿಳಿಗೇರಿ ಗ್ರಾಮದಲ್ಲಿ ಇರುವ ಸುಮಾರು 7 ಎಕರೆ ಕಾಫಿ ತೋಟವನ್ನು ನಿಶ್ಚಲ್ ಇತ್ತೀಚಿಗೆ ಖರೀದಿ ಮಾಡಿದ್ದ. ಆದರೆ ಈ ಕಾಫಿ ತೋಟವನ್ನು ಕಳೆದ 30 ವರ್ಷಗಳಿಂದ ತೀರ್ಥ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ತೋಟದ ಜಾಗಕ್ಕೆ ದಾಖಲೆಗಳನ್ನು ಮಾಡಲು ಮುಂದಾಗಿದ್ದರು. ಆದರೆ ತೋಟವನ್ನು ಬೇರೆ ಅವರ ಕೈಯಿಂದ ನಿಶ್ಚಲ್ ಖರೀದಿ ಮಾಡಿರುವುದರಿಂದ ಈ ಪ್ರಕರಣ ಕಳೆದ 6 ತಿಂಗಳ ಹಿಂದೆಯೇ ಕೋರ್ಟ್‌ ಮೆಟ್ಟಿಲು ಏರಿತ್ತು. ಆದರೆ ತೀರ್ಥ ಕಾಫಿ ತೋಟವನ್ನು ಬೇರೆ ಅವರಿಗೆ ಕಾಫಿಗೆ ಲೀಜ್ ನೀಡಿದ್ದರು. ಇದನ್ನು ಪ್ರಶ್ನಿಸಲು ನಿಶ್ಚಲ್ ಸ್ಥಳಕ್ಕೆ ಹೋಗಿರುವಾಗ 2 ಕುಟುಂಬಗಳ ನಡುವೆ ‌ಮಾತಿಗೆ ಮಾತು ಬೆಳೆದು ಗುಂಡು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇದನ್ನೂ ಓದಿ: ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ
Sign in to your account
Username or Email Address


Password

 Remember Me


