ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆಗಸ್ಟ್ 12ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿಯೂ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ಕಳೆದ ಜುಲೈ ತಿಂಗಳಲ್ಲಿ ಆರ್ದ್ರತೆ ಮತ್ತು ಶಾಖ ಎದುರಿಸುತ್ತಿದ್ದ ಜನರು ಮುಂದಿನ ದಿನಗಳಲ್ಲಿ ಭಾರೀ ಮಳೆ ಎದುರಿಸುವ ಸಾಧ್ಯತೆ ಇದೆ. ಜೊತೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಎಚ್ಚರಿಸಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 28-24
ಶಿವಮೊಗ್ಗ: 28-21
ಬೆಳಗಾವಿ: 27-20
ಮೈಸೂರು: 29-21ಮಂಡ್ಯ: 30-21
ಮಡಿಕೇರಿ: 23-17
ರಾಮನಗರ: 30-22
ಹಾಸನ: 27-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 29-21ಕೋಲಾರ: 30-21
ತುಮಕೂರು: 29-21
ಉಡುಪಿ: 29-24
ಕಾರವಾರ: 28-24
ಚಿಕ್ಕಮಗಳೂರು: 29-21
ದಾವಣಗೆರೆ: 29-22ಹುಬ್ಬಳ್ಳಿ: 28-21
ಚಿತ್ರದುರ್ಗ: 29-21
ಹಾವೇರಿ: 29-21
ಬಳ್ಳಾರಿ: 33-23
ಗದಗ: 29-21
ಕೊಪ್ಪಳ: 31-22ರಾಯಚೂರು: 33-24
ಯಾದಗಿರಿ: 33-24
ವಿಜಯಪುರ: 31-22
ಬೀದರ್: 30-23
ಕಲಬುರಗಿ: 32-23
ಬಾಗಲಕೋಟೆ: 31-22Sign in to your account
Username or Email Address


Password

 Remember Me


