ಬೆಳಗಾವಿ: ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ(Murugesh Nirani) ಅವರು ಸುವರ್ಣ ಸೌಧಕ್ಕೆ(Suvarna Soudha) ಬೈಕ್‌ನಲ್ಲಿ ಆಗಮಿಸಿದ್ದರು.ಮಧ್ಯದಾರಿಯಲ್ಲಿ ಟ್ರಾಫಿಕ್ ಜಾಮ್(Traffic Jam) ಆಗಿತ್ತು. ಹೀಗಾಗಿ ಬೈಕ್ ಏರಿ ಸಚಿವರು ಸುವರ್ಣ ವಿಧಾನಸೌಧವನ್ನು ತಲುಪಿದರು. ಇದನ್ನೂ ಓದಿ: ಸುವರ್ಣ ಸೌಧದ ಬ್ಯಾರಿಕೇಡ್‌ ಎಸೆದು ದ್ವಾರದ ಮೇಲೆ ಹತ್ತಿ ವಕೀಲರ ಪ್ರತಿಭಟನೆವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಇಂದು ನೇರವಾಗಿ ಸುವರ್ಣ ಸೌಧ ಒಳಗಡೆ ಪ್ರವೇಶಿಸಲು ಮುಂದಾಗಿದ್ದರು. ಭಾರೀ ಸಂಖ್ಯೆಯಲ್ಲಿ ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು.ಮಧ್ಯಾಹ್ನ ಸುವರ್ಣ ಸೌಧದಿಂದ ಹೊರಗಡೆ ತೆರಳಿದ್ದ ನಿರಾಣಿ ಮರಳಿ ಅಧಿವೇಶನಕ್ಕೆ ಬರುವಾಗ ಸಂಚಾರ ದಟ್ಟಣೆಯಿಂದಾಗಿ ಕಾರಿನಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸಚಿವರು ಬೈಕನ್ನು ಏರಿ ಸುವರ್ಣ ಸೌಧಕ್ಕೆ ಮರಳಿದರು.
Sign in to your account
Username or Email Address


Password

 Remember Me


