ಹಾಸನ: ಕೊರಿಯರ್ ಅಂಗಡಿಯಲ್ಲಿ ಅನುಮಾನಾಸ್ಪದವಾಗಿ ಹೊಸ ಮಿಕ್ಸರ್‌ (Mixer) ಬ್ಲಾಸ್ಟ್ ಆಗಿ ಅಂಗಡಿಯಲ್ಲಿದ್ದ ವ್ಯಕ್ತಿಯ ಕೈಗೆ ಗಂಭೀರ ಗಾಯವಾದ ಘಟನೆ ಹಾಸನದ (Hassan) ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.ಹಾಸನದ ಕುವೆಂಪುನಗರದ 16ನೇ ಕ್ರಾಸ್‍ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ (Courier Shop) ಈ ಘಟನೆ ಸಂಭವಿಸಿದೆ. ಡಿಟಿಡಿಸಿ ಅಂಗಡಿಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯು, ಮಿಕ್ಸಿ, ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲೀಕನಿಗೆ ವಾಪಸ್ ನೀಡಿದ್ದ. ಅಂಗಡಿ ಮಾಲೀಕ ಶಶಿ ಮಿಕ್ಸಿಯನ್ನು ಪರಿಶೀಲನೆ ಮಾಡುವಾಗ ಸ್ಫೋಟಗೊಂಡಿದೆ. ಇದನ್ನೂ ಓದಿ: ಮಾರುವೇಷದಲ್ಲಿ ಬೆಳಗಾವಿಗೆ ನುಗ್ಗಲು ಶಿವಸೇನೆ ಯತ್ನಸ್ಫೋಟದ ರಭಸಕ್ಕೆ ಕೊರಿಯರ್ ಅಂಗಡಿ ಮಾಲೀಕ ಶಶಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಸ್ಫೋಟದಿಂದಾಗಿ ಅಂಗಡಿಯ ಗ್ಲಾಸ್, ಗೋಡೆಗೂ ಹಾನಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಐಷಾರಾಮಿ ಕಾರು ಖರೀದಿ ನೆಪದಲ್ಲಿ ವಂಚಿಸಿದವ ಅರೆಸ್ಟ್- 10 ಕೋಟಿ ಮೌಲ್ಯದ 9 ಕಾರು ಜಪ್ತಿ
Sign in to your account
Username or Email Address


Password

 Remember Me


