ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಟ್ಟಿಮೇಳದ ಸದ್ದು ಜೋರಾಗಿದೆ. ಇತ್ತೀಚೆಗೆ ವಸಿಷ್ಠ ಮತ್ತು ಹರಿಪ್ರಿಯಾ, ಅವಿವಾ ಮತ್ತು ನಟ ಅಭಿಷೇಕ್ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಟಿ ರಚನಾ (Rachana Dashrath) ಜೊತೆ ಲೋಕೇಶ್ ಬಸವಟ್ಟಿ (Lokesh Basavatti) ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ.  A post shared by Aarva Basavatti (@lokeshbasavatti_gowdru)ಹಲವು ವರ್ಷಗಳಿಂದ ರಚನಾ ಮತ್ತು ಲೋಕೇಶ್ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ತಾವು ಎಂಗೇಜ್ ಆಗಿರುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್ ಮಾಡಲು ಸಿಎಂಗೆ ಮನವಿ  A post shared by Rachana Dashrath ???? (@rachanadashrath)ನಟನೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ಬಸವಟ್ಟಿ `ನಟನಾ’ ಸಂಸ್ಥೆ ಸೇರಿದರು. ಕೆಲ ನಾಟಕಗಳಲ್ಲಿ ಅಭಿನಯಿಸಿದರು. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಲೋಕೇಶ್ ಬಸವಟ್ಟಿ ನಟಿಸಿದ್ದಾರೆ. ಪಾರ್ವತಿ ಪರಮೇಶ್ವರ ಸೀರಿಯಲ್‌ನಲ್ಲಿನ ಲಾಯರ್ ಗುಂಡಣ್ಣ ಪಾತ್ರ ಲೋಕೇಶ್ ಬಸವಟ್ಟಿ ಅವರಿಗೆ ಖ್ಯಾತಿ ತಂದುಕೊಡ್ತು. `ಚತುರ್ಭುಜ’ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಲೋಕೇಶ್ ಬಸವಟ್ಟಿ ಮಿಂಚಿದ್ದಾರೆ.ಮೂಲತಃ ನೇಪಾಳಿ ಕುಟುಂಬಕ್ಕೆ ಸೇರಿದವರು ರಚನಾ ದಶರಥ್. ಆದರೆ, ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಹೀಗಾಗಿ ಕನ್ನಡ ಭಾಷೆಯನ್ನ ಸಲೀಸಾಗಿ ರಚನಾ ಮಾತನಾಡುತ್ತಾರೆ. ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ರಚನಾ ದಶರಥ್ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟರು. `ಮಾತು ಕಥೆ’, ‘ಯೋಗಿ ದುನಿಯಾ’, ‘ಸಮರ್ಥ’ ಮುಂತಾದ ಸಿನಿಮಾಗಳಲ್ಲಿ ರಚನಾ ದಶರಥ್ ಅಭಿನಯಿಸಿದ್ದಾರೆ.
Sign in to your account
Username or Email Address


Password

 Remember Me


