ಮೈಸೂರು: ದೊಡ್ಡ ಗೌಡರ ಮನೆಯ ಹಾಸನ (Hassan) ಜಿಲ್ಲೆಯ ಪಾಲಿಟಿಕ್ಸ್ (Politics) ಈಗ ಮೈಸೂರಿನವರೆಗೂ (Mysuru) ವಿಸ್ತಾರಗೊಂಡಿದೆ.ಹಾಸನ ಜಿಲ್ಲೆಯ ಶಾಸಕ ಪ್ರೀತಂ ಗೌಡಗೆ ಟಕ್ಕರ್ ಕೊಡಲು ಮುಂದಾದ ಭವಾನಿ ರೇವಣ್ಣ (Bhavani Revanna) ಹಾಸನದ ಮತದಾರರಿಗೆ (Voters) ಮೈಸೂರಿನಲ್ಲಿ ಬಾಡೂಟ ಹಾಕಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆಭವಾನಿ ಹುಟ್ಟೂರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಭಾನುವಾರ ಭರ್ಜರಿ ಔತಣ ಕೂಟ ಆಯೋಜನೆ ಮಾಡಿದ್ದರು. ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಅವರ ಮನೆಯಲ್ಲಿ ಔತಣ ಕೂಟ ಆಯೋಜನೆಯಾಗಿತ್ತು. ಇದನ್ನೂ ಓದಿ: ಬೆಂಗಳೂರು-ತುಮಕೂರು ದಶಪಥ ಹೆದ್ದಾರಿ 2025ರ ಆಗಸ್ಟ್ ವೇಳೆಗೆ ಸಿದ್ಧ: ಗಡ್ಕರಿ ರೇವಣ್ಣ ದಂಪತಿಯೇ ಮುಂದೆ ನಿಂತು ಹಾಸನದ ಪ್ರತಿಯೊಬ್ಬ ಜೆಡಿಎಸ್ (JDS) ಕಾರ್ಯಕರ್ತರನ್ನ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಭವಾನಿ ರೇವಣ್ಣ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
Sign in to your account
Username or Email Address


Password

 Remember Me


