ದೊಡ್ಮನೆಯ ಆಟ 93 ದಿನಗಳನ್ನ ಪೂರೈಸಿ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಈ ವಾರ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಜೊತೆ ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ಹಾಗೆಯೇ ಫಿನಾಲೆ ಅಖಾಡಕ್ಕೆ ಆರು ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಶೀಘ್ರವೇ ಮತ್ತೊಂದು ಎಲಿಮಿನೇಷನ್ ನಡೆಯಲಿದೆ.ಬಿಗ್ ಬಾಸ್ ಮನೆಯ (Bigg Boss House) ಆಟ ಸಾಕಷ್ಟು ಟ್ವಿಸ್ಟ್ಗಳನ್ನ ಪಡೆದು ಅಂತಿಮ ಹಂತದತ್ತ ಮುನ್ನುಗ್ಗುತ್ತಿದೆ. ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್ (Arun Sagar) ಎಲಿಮಿನೇಷನ್ ನಂತರ ಆರು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಹೆಜ್ಜೆ ಇಟ್ಟಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ ನಡುವೆ ಸ್ಪರ್ಧೆ ಮುಂದುವರೆದಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನಸುದೀಪ್ ಅವರು ಬಹಳ ಲವಲವಿಕೆಯಿಂದ `ಬಿಗ್ ಬಾಸ್ ಸೀಸನ್ 9′ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಫಿನಾಲೆಯಲ್ಲಿ 5 ಜನರ ನಡುವೆ ಹಣಾಹಣಿ ನಡೆಯಲಿದೆ. ಅಂತಿಮವಾಗಿ ಒಬ್ಬರು ಟ್ರೋಫಿ ಎತ್ತಲಿದ್ದಾರೆ. ಸದ್ಯ ಮನೆಯಲ್ಲಿ ಇರುವ 6 ಜನರ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಔಟ್ ಆಗಲೇಬೇಕಿದೆ. ಆ ಎಲಿಮಿನೇಷನ್ ತುಂಬ ಅಚ್ಚರಿಯಾಗಿ ಇರಲಿದೆ. ಅದಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.ಇನ್ನೂ ಇಬ್ಬರು ಫೆನಲಿಸ್ಟ್ ಆಗಿ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಎಂಟ್ರಿ ಕೊಟ್ಟಿದ್ದರು. ಇಬ್ಬರ ಮಧ್ಯೆಯೂ ಸಖತ್ ಪೈಪೋಟಿಯಿದೆ. ಟಾಪ್ 5 ಸ್ಪರ್ಧಿಗಳು ಯಾರಾಗ್ತಾರೆ? ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
Sign in to your account
Username or Email Address


Password

 Remember Me


