ಬೀದರ್: ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ (Woman) ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ನಡೆದಿದೆ.ಮೇಘಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಪತಿ ಹಾಗೂ ಅತ್ತೆ ಮಾನಸಿಕವಾಗಿ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಜೊತೆಗೆ ಆಕೆಯ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಮೇಘಾಳ ಪೋಷಕರು ಆರೋಪಿಸಿದ್ದಾರೆ.ಮೇಘಾ ಮೂಲತಃ ಭಾಲ್ಕಿಯ ಖಟಕ್‌ ಚಿಂಚೋಳಿ ಗ್ರಾಮದವರಾಗಿದ್ದು, ಆಕೆಯನ್ನು 2 ವರ್ಷಗಳ ಹಿಂದೆ ಹುಮ್ನಾಬಾದ್‌ನ ಹಳ್ಳಿಖೇಡ್ ಗ್ರಾಮದ ಮಂಜುನಾಥ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ 3 ತಿಂಗಳ ಬಳಿಕ ಮೇಘಾಳಿಗೆ ಆಕೆಯ ಪತಿ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಇದರಿಂದ ಬೇಸತ್ತ ಮೇಘಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿಈ ಕುರಿತು ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೇಘಾ ಪೋಷಕರು ಪೊಲೀಸರಿಗೆ (Police) ದೂರು ನೀಡಿದ್ದು, ಮೇಘಾ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಪೊಲೀಸ್ ಠಾಣೆಯ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹಿರಿಯ ನಟ ಚಲಪತಿ ರಾವ್ ಹೃದಯಾಘಾತದಿಂದ ನಿಧನ
Sign in to your account
Username or Email Address


Password

 Remember Me


