ಕಳೆದ ಕೆಲವು ದಿನಗಳ ಹಿಂದೆ ಮಾಂಡೌಸ್ ಚಂಡಮಾರುತದ ಹಿನ್ನೆಲೆ ರಾಜ್ಯಾದ್ಯಂತ ಮಳೆ (Rain) ಸುರಿದಿದ್ದು, ಬಳಿಕ ವರುಣ ಸ್ವಲ್ಪ ಬಿಡುವು ನೀಡಿದ್ದ. ಇದೀಗ ಮಳೆರಾಯ ಮತ್ತೆ ರಾಜ್ಯಕ್ಕೆ ಲಗ್ಗೆಯಿಡುವ ಸೂಚನೆಯನ್ನು ಹವಾಮಾನ ಇಲಾಖೆ (Meteorological Department) ನೀಡಿದೆ.ಇಂದಿನಿಂದ 3 ದಿನ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗಲಿದೆ. ಮಳೆ ದಕ್ಷಿಣ ಒಳನಾಡನ್ನು ಕಾಡಲಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿದ 9 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆಯಿದೆ. ಬಳಿಕ 2 ದಿನ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 34-25
ಶಿವಮೊಗ್ಗ: 32-21
ಬೆಳಗಾವಿ: 32-19
ಮೈಸೂರು: 28-19
ಮಂಡ್ಯ: 28-19ಮಡಿಕೇರಿ: 27-17
ರಾಮನಗರ: 28-20
ಹಾಸನ: 28-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 26-18ಕೋಲಾರ: 26-19
ತುಮಕೂರು: 29-19
ಉಡುಪಿ: 33-24
ಕಾರವಾರ: 33-25
ಚಿಕ್ಕಮಗಳೂರು: 28-18
ದಾವಣಗೆರೆ: 32-21ಹುಬ್ಬಳ್ಳಿ: 33-21
ಚಿತ್ರದುರ್ಗ: 30-20
ಹಾವೇರಿ: 33-21
ಬಳ್ಳಾರಿ: 31-22
ಗದಗ: 32-21
ಕೊಪ್ಪಳ: 31-22ರಾಯಚೂರು: 32-21
ಯಾದಗಿರಿ: 32-21
ವಿಜಯಪುರ: 32-21
ಬೀದರ್: 31-19
ಕಲಬುರಗಿ: 32-21
ಬಾಗಲಕೋಟೆ: 32-21
Sign in to your account
Username or Email Address


Password

 Remember Me


