ಬಿಗ್ ಬಾಸ್ ಮನೆಯ (Bigg Boss House) ಆಟ, ಅಂತಿಮ ಹಂತಕ್ಕೆ ಬಂದು ತಲುಪಿದೆ. ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಫಿನಾಲೆಗೆ ಕೆಲವೇ ದಿನಗಳಿರುವ ಈ ಸಮಯದಲ್ಲಿ ಫಿನಾಲೆಗೆ ಹೋಗುವ ಸ್ಪರ್ಧಿಗಳ ಹೆಸರನ್ನ ಕಿಚ್ಚ ಸುದೀಪ್ ಘೋಷಿಸಿದ್ದಾರೆ.ದಿನದಿಂದ ದಿನಕ್ಕೆ ಹಲವು ಟ್ವಿಸ್ಟ್‌ಗಳನ್ನ ಪಡೆದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಇದೀಗ 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ ಫಿನಾಲೆಗೆ ಹೋಗುವ ಇಬ್ಬರು ಸ್ಪರ್ಧಿಗಳ ಹೆಸರನ್ನ ಕಿಚ್ಚ ಸುದೀಪ್ (Kiccha Sudeep) ಅನೌನ್ಸ್ ಮಾಡಿದ್ದಾರೆ. ಅಮೂಲ್ಯ ಗೌಡ ಎಲಿಮಿನೇಷನ್ ನಡುವೆ ಫಿನಾಲೆ ಹೋಗುವ ಫೈನಲಿಸ್ಟ್‌ಗಳ ಹೆಸರನ್ನ ಕಿಚ್ಚ ಹೇಳಿದ್ದಾರೆ.ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಡುವ ಮೊದಲ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ (Roopesh Shetty) ಹೊರಹೊಮ್ಮಿದ್ದಾರೆ. ರಾಕೇಶ್ ಅಡಿಗ (Rakesh Adiga) ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss) ಮೋಡಿ ಮಾಡಿದ್ದ ರೂಪೇಶ್ ಮತ್ತು ರಾಕೇಶ್ ಫಿನಾಲೆಯ ಕದ ತಟ್ಟಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಚಲಪತಿ ರಾವ್ ಹೃದಯಾಘಾತದಿಂದ ನಿಧನಇನ್ನೂ ಈ ವಾರ ಬಿಗ್ ಬಾಸ್, ಬಿಗ್ ಶಾಕ್ ಕೊಟ್ಟಿದ್ದಾರೆ. ಡಬಲ್ ಎಲಿಮಿನೇಷನ್ ಮಾಡುವ ಮೂಲಕ ದೊಡ್ಮನೆಯಿಂದ ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್(Arun Sagar) ಅವರ ಆಟ ಫಿನಾಲೆಗೂ ಮುನ್ನ ಅಂತ್ಯವಾಗಿದೆ.
Sign in to your account
Username or Email Address


Password

 Remember Me


