ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 150+ ಸ್ಥಾನ ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ ಜನಾರ್ದನ ರೆಡ್ಡಿ(Janardhan Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ(KRPP) ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.ಈ ಪ್ರಶ್ನೆ ಏಳಲು ಕಾರಣ 2013ರ ಚುನಾವಣಾ ಫಲಿತಾಂಶ. 2013ರ ಚುನಾವಣೆಯಲ್ಲಿ ಬಿಎಸ್‌ ಯಡಿಯೂರಪ್ಪ(BS Yediyurappa) ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಮಾಡಿದ್ದರೆ ಶ್ರೀರಾಮುಲು(B Sriramulu) ಬಡವರ ರೈತರ ಶ್ರಮಿಕರ ಕಾಂಗ್ರೆಸ್‌(BSRC) ಪಕ್ಷವನ್ನು ಸ್ಥಾಪಿಸಿದ್ದರು. ಈ ಎರಡು ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೂ ಬಿಜೆಪಿಯ ಮತವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದವು.  ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ 204 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 9.8% ಮತ ಪಡೆದು 6 ಸೀಟು ಗೆದ್ದು 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿತ್ತು. ರಾಮುಲು ನೇತೃತ್ವದ ಬಿಎಸ್‌ಆರ್‌ಸಿ ಪಕ್ಷ 176 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 2.7% ಮತ ಪಡೆದು 4 ಸೀಟು ಗೆದ್ದು, 5ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅಡ್ಡಿ ಆಗಿತ್ತು.2008ರ ಚುನಾವಣೆಯಲ್ಲಿ 33.9% ಮತ ಪಡೆದು 110 ಸ್ಥಾನ ಪಡೆದಿದ್ದ ಬಿಜೆಪಿ 2013ರ ಚುನಾವಣೆಯಲ್ಲಿ 19.9% ಮತ ಪಡೆದು ಕೇವಲ 40 ಸ್ಥಾನ ಮಾತ್ರ ಗೆದ್ದಿತ್ತು. ಮಧ್ಯ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಗೆ ಈ ಎರಡು ಪಕ್ಷಗಳು ಕಾರಣ ಎಂಬ ವಿಶ್ಲೇಷಣೆ ಬಂದಿತ್ತು. 
2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಮರಳಿ ಪಕ್ಷ ಸೇರಿದ್ದರಿಂದ ಬಿಜೆಪಿ 43.4% ಮತ ಪಡೆದು 17 ಸ್ಥಾನವನ್ನು ಗೆದ್ದುಕೊಂಡಿತ್ತು. ಯಡಿಯೂರಪ್ಪ ಶಿವಮೊಗ್ಗದಿಂದ ಆಯ್ಕೆ ಆಗಿದ್ದರೆ ಬಳ್ಳಾರಿಯಿಂದ ಶ್ರೀರಾಮುಲು ಗೆದ್ದಿದ್ದರು.  ಇದನ್ನೂ ಓದಿ: ನಾನು ಕಷ್ಟದಲ್ಲಿ ಇದ್ದಾಗ ಬಿಎಸ್‌ವೈ, ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ: ಜನಾರ್ದನ ರೆಡ್ಡಿ2018ರ ವಿಧಾನಸಭೆ ವೇಳೆ ಬಿಜೆಪಿ 36.2% ಮತ ಪಡೆದು 104 ಸ್ಥಾನ ಗೆದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 51% ಮತ ಪಡೆದು ಒಟ್ಟು 28 ಸ್ಥಾನಗಳ ಪೈಕಿ 25 ಸ್ಥಾನವನ್ನು ಗೆದ್ದುಕೊಂಡಿತ್ತು.
Sign in to your account
Username or Email Address


Password

 Remember Me


