ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್‌ ಖಾನ್(Congress Leader Altaf Khan) ಮೇಲೆ ದಾಳಿ ನಡೆಸಲು ಬಂದಿದ್ದಾರೆ ಎನ್ನಲಾದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಶನಿವಾರ ರಾತ್ರಿ 10 ಗಂಟೆಯ ವೇಳೆ ಗೋರಿಪಾಳ್ಯದಲ್ಲಿರುವ ಅಲ್ತಾಫ್‌ ಖಾನ್ ಮನೆ ಬಳಿ ಒಂದು ರಿಕ್ಷಾ ಬಂದಿತ್ತು. ರಿಕ್ಷಾದಲ್ಲಿದ್ದ ವ್ಯಕ್ತಿಗಳು ಬಹಳ ಹೊತ್ತು ಅಲ್ತಾಫ್‌ಗೆ ಕಾದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್ಅಲ್ತಾಫ್‌ ಅವರು ಮನೆಯಿಂದ ಹೊರ ಬಾರದ ಕಾರಣ ಬಚಾವ್ ಆದ ಎಂದು ಗುಂಪು ಮಾತನಾಡಿಕೊಂಡು ಹೋಗುತ್ತಿತ್ತು. ರಿಕ್ಷಾ ನಿಂತ ಕೂಡಲೇ ಅನುಮಾನದಿಂದ ನೋಡುತ್ತಿದ್ದ ಸ್ಥಳೀಯರು ಯುವಕರ ಮಾತುಗಳನ್ನು ಕೇಳಿ ಹಿಂಬಾಲಿಸಿದ್ದಾರೆ.ತಮ್ಮನ್ನು ಹಿಂಬಾಲಿಸುವುದನ್ನು ನೋಡಿ ಗುಂಪಿನಲ್ಲಿದ್ದ ಓರ್ವ ಪರಾರಿಯಾಗಿದ್ದು, ಮೂವರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ರಿಕ್ಷಾವನ್ನು ಜಾಲಾಡಿದಾಗ ಮಾರಕಾಸ್ತ್ರ ಪತ್ತೆಯಾಗಿದೆ. ಜೆ.ಜೆ.ನಗರ ಪೊಲೀಸರು(JJ Nagar Police) ಈಗ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Sign in to your account
Username or Email Address


Password

 Remember Me


