ಹಾಸನ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (Bus) ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು (Students) ಸೇರಿ ಏಳು ಮಂದಿ ಗಾಯಗೊಂಡಿರುವ ಘಟನೆ ಹಾಸನ (Hassana) ಜಿಲ್ಲೆ, ಬೇಲೂರು (Belur) ಹೊರವಲಯದ ಕುವೆಂಪುನಗರದಲ್ಲಿ ನಡೆದಿದೆ.ಕನಕಪುರದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ (SSLC) ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರವಾಸಕ್ಕೆ ಬಂದಿದ್ದರು. ಕನಕಪುರದಿಂದ ಬುಧವಾರ ಎರಡು ಬಸ್‍ಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 71 ಮಂದಿ ಪ್ರವಾಸ ಹೊರಟಿದ್ದರು. ಪ್ರವಾಸ ಮುಗಿಸಿ ವಾಪಾಸ್ ಆಗುವಾಗ ಇಂದು ಬೆಳಗ್ಗೆ ಬಸ್ ಪಲ್ಟಿಯಾಗಿದೆ. ಬಸ್‍ನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರಿಗೆ ಗಾಯಗಳಾಗಿದ್ದು, ಬೇಲೂರು ಹಾಗೂ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಕ್ಯಾಂಟರ್‌ಗೆ ಗುದ್ದಿದ ಟಿಟಿ – ಇಬ್ಬರು ಸಾವುಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವುLive Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


