ಬೆಂಗಳೂರು: ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಇಂದು ನಗರದ ರಾಜಭವನದಲ್ಲಿ ಪುರುಷರ ಹಾಕಿ ವಿಶ್ವಕಪ್ ಟ್ರೋಫಿ-2023 (Men’s Hockey World Cup – 2023) ಅನ್ನು ಅನಾವರಣಗೊಳಿಸಿದರು.ಪುರುಷರ ಹಾಕಿ ವಿಶ್ವಕಪ್ ಟ್ರೋಫಿ-2023 ಶುಕ್ರವಾರ ರಾಜಧಾನಿ ಬೆಂಗಳೂರಿಗೆ (Bengaluru) ಆಗಮಿಸಿದ್ದು, ಕರ್ನಾಟಕ ರಾಜ್ಯ ಹಾಕಿ ಸಂಘದ (Karnataka State Hockey Association) ಪದಾಧಿಕಾರಿಗಳು, ಸದಸ್ಯರು, ರಾಜ್ಯ ಹಾಕಿ ಕ್ರೀಡಾಪಟುಗಳು ಹಾಗೂ ಹಾಕಿ ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಇದನ್ನೂ ಓದಿ: ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವನ ನರ ಕಟ್ ಮಾಡಿ ಎಂದ ಉರ್ಫಿ ಜಾವೇದ್ಈ ವೇಳೆ ಮಾತನಾಡಿದ ರಾಜ್ಯಪಾಲರು, ಪುರುಷರ ಹಾಕಿ ವಿಶ್ವಕಪ್‌ ಜನವರಿ 13-29ರ ವರೆಗೆ ಒಡಿಶಾದಲ್ಲಿ ನಡೆಯಲಿರುವುದು ಸಂತಸದ ವಿಷಯ. ಈ ಸ್ಪರ್ಧೆಯಲ್ಲಿ ಭಾರತದ ತಂಡ ಗೆಲವು ಸಾಧಿಸಲೆಂದು ಪ್ರಾರ್ಥಿಸುವುದಾಗಿ ಎಂದರು. ಹಾಗೂ ಭಾರತದ ಹಾಕಿ ತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆಈ ಸಂದರ್ಭದಲ್ಲಿ ಕರ್ನಾಟಕ ಹಾಕಿ ಅಸೋಸಿಯೇಶನ್ ಅಧ್ಯಕ್ಷ ಸುಬ್ರಮಣಿ ಗುಪ್ತ, ಕಾರ್ಯದರ್ಶಿ ಡಾ.ಎ.ಬಿ ಸುಬ್ಬಯ್ಯ, ಒಲಂಪಿಕ್ ಅಸೋಸಿಯೇಷನ್ ಕಾರ್ಯದರ್ಶಿ ಅನಂತ್ ರಾಜ್ ಸೇರಿದಂತೆ ರಾಜ್ಯ ಹಾಕಿ ಕ್ರೀಡಾಪಟುಗಳು ಉಪಸ್ಥಿತರಿದ್ದರು.
Sign in to your account
Username or Email Address


Password

 Remember Me


