ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಗೆಳೆತನವಿರುವ ನೇಹಾ (Neha Gowda) ಮತ್ತು ಅನುಪಮಾ (Anupama) ಮತ್ತೆ ದೊಡ್ಮನೆಯಲ್ಲಿ ಮುಖಾಮುಖಿ ಆಗಿದ್ದು ಹೇಗಿತ್ತು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ.ಬಿಗ್ ಬಾಸ್ ಸೀಸನ್ 5ರಲ್ಲಿ ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ನೇಹಾ ಮತ್ತು ಅನುಪಮಾ ಸಾಕಷ್ಟು ವರ್ಷಗಳಿಂದ ಫ್ರೆಂಡ್ಸ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಮತ್ತೆ ಬಿಗ್ ಬಾಸ್‌ನಲ್ಲೂ ಜೊತೆಯಾಗಿದ್ದರ ಬಗ್ಗೆ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್ನಾವಿಬ್ಬರು ಫ್ರೆಂಡ್ಸ್ ಅಂತಾ ಎಲ್ಲರಿಗೂ ಮೊದಲೇ ತಿಳಿದಿರುವ ವಿಚಾರ. ಮನೆಯಲ್ಲಿ ಬೇಕಂತಲೇ ಬೆಂಬಲ ಕೊಟ್ಟು ಇರುತ್ತೀವಿ ಎಂಬುದು ಪ್ರೇಕ್ಷಕರ ತಲೆಗೂ ಬರುತ್ತೆ ಆ ಯೋಚನೆ ತೆಗೆದು ಹಾಕಬೇಕು ಅಂತನೇ ನಾವು ಯೋಚನೆ ಮಾಡಿದ್ದೀವಿ. ನಾನು ಮೊದಲೇ ಹೇಳಿದ್ದೇ ನೇಹಾಗೆ, ನಿನ್ನ ಆಟ ನಿನಗೆ, ನೀನು ನನ್ನ ಕಾಂಪಿಟೇಟರ್ ಎಂದು ತಿಳಿಸಿದ್ದೆ. ನನ್ನ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ ಮನೆಯೊಳಗೂ ಸಿಗುತ್ತಾಳೆ ಅಂತಾ ಖುಷಿಯಾಗಿತ್ತು.ನಾನು ಲೋ ಆಗಿದ್ದೀನಿ ಅಂದಾಗ ಹಗ್ ಮಾಡಿ, ಬೆಂಬಲ ಕೊಡುತ್ತಿದ್ದಳು. ಬಿಗ್ ಬಾಸ್‌ನಲ್ಲಿ ನೇಹಾ ನ್ಯೂ ವರ್ಷನ್ ನೋಡಿದೆ, ಸ್ಟ್ರಾಂಗ್ ಆಗಿರುವ ನೇಹಾನಾ ನೋಡಿದೆ ಎಂದು ಅನುಪಮಾ ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


