ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ (Anupama Anandkumar) ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ (Roopesh Shetty) ಎನರ್ಜಿ ಲೆವೆಲ್ ಹೇಗಿತ್ತು. ನಂತರ ಅದೆಷ್ಟರ ಮಟ್ಟಿಗೆ ರೂಪೇಶ್ ಬದಲಾದರು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಿತ್ರಕ್ಕೆ 4 ವರ್ಷಗಳ ಸಂಭ್ರಮ, ಮೈಲಿಗಲ್ಲು ಸೃಷ್ಟಿಸಿದ ದಿನದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮೆಲುಕುಬಿಗ್ ಬಾಸ್ ಸೀಸನ್ 5ರಲ್ಲಿ(Bigg Boss) ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ಪ್ರವೀಣರ ಸಾಲಿನಲ್ಲಿ ಅನುಪಮಾ ಗಟ್ಟಿ ಸ್ಪರ್ಧಿಯಾಗಿ ಇತರರಿಗೆ ಸೆಡ್ಡು ಹೊಡೆದರು. ಆದರೆ ಅನುಪಮಾ ಧಿಡೀರ್ ಎಲಿಮಿನೇಷನ್(Elimination) ಅನೇಕರಿಗೆ ಶಾಕ್ ಕೊಟ್ಟಿತ್ತು. ಇದೀಗ ತಮ್ಮ ಬಿಗ್ ಬಾಸ್ ಜರ್ನಿಯ ಜೊತೆಗೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಅನುಪಮಾ ರಿಯಾಕ್ಟ್ ಮಾಡಿದ್ದಾರೆ.ಸಾನ್ಯ ಎಲಿಮಿನೇಷನ್‌ಗೂ ಮುಂಚೆ ರೂಪೇಶ್, ಯಾರ ಜೊತೆನೂ ಮಿಂಗಲ್ ಆಗುತ್ತಾ ಇರಲಿಲ್ಲ. ಒಟಿಟಿಯಿಂದ ಅವರ ಫ್ರೆಂಡ್‌ಶಿಪ್ ಇದ್ದ ಕಾರಣ, ಇಬ್ಬರಿಗೂ ಕಂಫರ್ಟ್‌ಜೋನ್‌ ಇದೆ. ರೂಪೇಶ್ ಎಲ್ಲಿ ಅಂತಾ ಹುಡುಕಿದರೆ ಅವರು ಯಾವಾಗಲೂ ಸಾನು ಜೊತೆನೇ ಇರೋದು. ಸಾನ್ಯ ಹೊರಗೆ ಹೋದ ಮೇಲೆ ಅದನ್ನ ಒಪ್ಪಿಕೊಳ್ಳೋಕೆ ಅವರಿಗೆ ಆಗಲಿಲ್ಲ. ಅವತ್ತು ಸಾನ್ಯ ಬಗ್ಗೆ ತುಂಬಾ ಎಮೋಷನಲ್ ಆಗಿದ್ದರು. ರೂಪೇಶ್ ಸ್ಥಿತಿ ನೋಡಿದಾಗ, ಅಯ್ಯೋ ಪಾಪ ಅನಿಸೋದು. ಒಂದು ವಾರದ ನಂತರ ಇದೀಗ ರೂಪೇಶ್ ಸ್ಟ್ರಾಂಗ್ ಆಗಿ ಆಡ್ತಿದ್ದಾರೆ.ಇನ್ನೂ ರೂಪೇಶ್ ಕ್ಯಾಪ್ಟೆನ್ಸಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಅನುಪಮಾ ಹೇಳಿದ್ದಾರೆ. ಹಾಗೆಯೇ ಬಿಗ್ ಬಾಸ್ ಫಿನಾಲೆಯಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿರುತ್ತಾರೆ ಎಂದು ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


