ಬಿಗ್ ಬಾಸ್ (Bigg Boss) ಮನೆಯ ಆಟ ಇದೀಗ ಕಡೆಯ ಘಟ್ಟದತ್ತ ಸಾಗುತ್ತಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. ಈ ವೇಳೆಯಲ್ಲಿ ‌ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದೂ ಅಚ್ಚರಿಯ ರೀತಿಯಲ್ಲಿ ಎನ್ನುವುದು ವಿಶೇಷ. ಹೌದು, ದೊಡ್ಮನೆಗೆ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಪ್ರವೇಶ ಪಡೆದಿದ್ದಾರೆ. ಫಿನಾಲೆ ಕೆಲವೇ ದಿನಗಳು ಬಾಕಿ ಇರುವಾಗ ಈ ಎಂಟ್ರಿ ಕುತೂಹಲವನ್ನು ಮೂಡಿಸಿದೆ.ಕಳೆದ ಸೀಸನ್ ನಲ್ಲಿ ಮನೆ ಮಾತಾಗಿದ್ದ ಸ್ಪರ್ಧಿ ಮಂಜು ಪಾವಗಡ (Manju Pavagada). ನಗಿಸುತ್ತಲೇ, ಕಾಲೆಳೆಯುತ್ತದೇ ಸಖತ್ ಮನರಂಜನೆ ನೀಡಿದ್ದ ಸ್ಪರ್ಧಿ. ಇದೀಗ ಅವರು ದೊಡ್ಮನೆಗೆ ಲಗ್ಗೆ ಇಟ್ಟಿದ್ದು, ಸ್ವತಃ ಮನೆ ಒಳಗೆ ಇರುವವರಿಗೆ ಅಚ್ಚರಿ ಮೂಡಿಸಿದೆ. ಮಂಜು ಪ್ರವೇಶ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನುಪಮಾ ಎಲಿಮಿನೇಷನ್ ನಂತರ 8 ಜನ ಸ್ಪರ್ಧಿಗಳಿರುವ‌ ಮನೆಯಲ್ಲಿ, ಕೇವಲ  ಜಟಾಪಟಿ ಮಾತ್ರ ಕಾಣಿಸುತ್ತಿತ್ತು. ಅದನ್ನು ಶಮನ ಮಾಡಲು ಮಂಜು ಬಂದಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರಹಾವು – ಏಣಿ  ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜೊತೆಗೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ, ಮಂಜುಗೆ ಅಮೂಲ್ಯ (Amulya) ಪ್ರಪೋಸ್ ಮಾಡಿದ್ದು, ಇದನ್ನ ನೋಡಿರೋ ರಾಕಿ, ಅಯ್ಯೋ ನನಗೆ ಹಾವು ಕಚ್ಚಿದ ಹಾಗೇ ಆಗುತ್ತಿದೆ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.
Sign in to your account
Username or Email Address


Password

 Remember Me


