ದೊಡ್ಮನೆಯಲ್ಲಿ ಗುರೂಜಿ ಹಾಗೂ ರೂಪೇಶ್ ಶೆಟ್ಟಿ (Roopesh Shetty) ಮಧ್ಯೆ ಗಾಢವಾದ ಆತ್ಮೀಯತೆ ಬೆಳೆದಿದೆ. ಗುರೂಜಿ ಅವರನ್ನ ರೂಪೇಶ್ ಶೆಟ್ಟಿ ತಂದೆಯಂತೆ ಕಾಣುತ್ತಾರೆ. ರೂಪೇಶ್ ಅವರನ್ನ ಆರ್ಯವರ್ಧನ್ ಗುರೂಜಿ (Aryavardhan Guruji)n ಮಗನಂತೆ ನೋಡುತ್ತಾರೆ. ಇವರಿಬ್ಬರೂ ಒಬ್ಬರಿಗೊಬ್ಬರು ನಿಷ್ಠೆಯಿಂದ ಇದ್ದಾರೆ. ಇದು ಓಟಿಟಿಯಿಂದ ಬಿಗ್ ಬಾಸ್‌ವರೆಗೂ ಮುಂದುವರೆದಿದೆ. ಈಗ ಮಗ ರೂಪಿಗಾಗಿ, ಗುರೂಜಿ ಗಳಗಳನೇ ಅತ್ತಿದ್ದಾರೆ.ರೂಪೇಶ್ ಶೆಟ್ಟಿ ಅವರನ್ನ ಸದಾ ಮಗ (Son) ಎನ್ನುವ ಗುರೂಜಿ, ಇದೀಗ ಅದೇ ಮಗನಿಗಾಗಿ ಕಣ್ಣೀರು ಹಾಕಿದ್ದಾರೆ. ಟಾಸ್ಕ್‌ನಲ್ಲಿ ಮಗನ ಕೈಯಿಂದ ಆಟ ಕಿತ್ತುಕೊಂಡು ಬಿಟ್ನಲ್ಲ ಅಂತ ಗುರೂಜಿ ಚಿಕ್ಕ ಮಗುವಿನಂತೆ ಭಾವುಕರಾಗಿದ್ದಾರೆ. ಬಾವುಟವನ್ನು ರೂಪೇಶ್ ಶೆಟ್ಟಿ ತಗೊಳ್ಬೇಕಿತ್ತು ಎಂದು ಗುರೂಜಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.13ನೇ ವಾರದ ಎರಡನೇ ಟಾಸ್ಕ್ ಆಗಿ ಗೆಲುವಿನ ಧ್ವಜವನ್ನ ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ, ಎಲ್ಲಾ ಸ್ಪರ್ಧಿಗಳು ವೃತ್ತದ ಒಳಗಿರುವ ಧ್ವಜವನ್ನು ಪಡೆಯಬೇಕಿತ್ತು. ಏಳು ಸುತ್ತುಗಳಲ್ಲಿ ಈ ಆಟ ನಡೆಯಲಿದ್ದು, ಒಂದೊಂದು ಸುತ್ತಿನಲ್ಲಿ ಒಂದೊಂದು ಬಾವುಟ ಕಡಿತಗೊಳಿಸಲಾಗುತ್ತಿತ್ತು. ಯಾರಿಗೆ ಬಾವುಟ ಸಿಗುವುದಿಲ್ಲವೋ ಅವರು ಔಟ್ ಆದಂತೆ. ಆಟದ ಕೊನೆಯವರೆಗೂ ಯಾರು ಬಾವುಟ ಪಡೆಯುತ್ತಾರೋ, ಅವರು ಗೆದ್ದಂತೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡಆಟದ ವೇಳೆ ಆರ್ಯವರ್ಧನ್ ಗುರೂಜಿಗೆ ಪೆಟ್ಟು ಬಿತ್ತು. ಆದರೂ ಅವರು ಆಟ ಮುಂದುವರೆಸಿದರು. ಒಂದು ಹಂತದಲ್ಲಿ ಗುರೂಜಿ, ರೂಪೇಶ್ ಶೆಟ್ಟಿ ಒಂದೇ ಬಾವುಟ ಹಿಡಿದಿದ್ದರು. ಈ ವೇಳೆ ಗುರೂಜಿಗಾಗಿ ರೂಪೇಶ್ ಶೆಟ್ಟಿ ಬಾವುಟವನ್ನ ಬಿಟ್ಟರು. ಈ ವೇಳೆ ಕಣ್ಣೀರು ಹಾಕಿದ ಆರ್ಯವರ್ಧನ್ ಗುರೂಜಿ, ಅವನು ತಗೊಳ್ಬೇಕಿತ್ತು. ನಾನು ತಗೊಂಡೆ ಎಂದು ಬಿಕ್ಕಳಿಸಿದರು. ಆಗ, ನೀವೇ ತಗೊಂಡಿದ್ದು, ಅದಕ್ಕೆ ನಾನು ಬಿಟ್ಟಿದ್ದು. ನಾನು ನಿಮಗೆ ಕೊಡಲಿಲ್ಲ ಎಂದು ರೂಪೇಶ್ ಶೆಟ್ಟಿ ಸಮಾಧಾನ ಮಾಡಿದರೂ, ಇಲ್ಲ ನೀನೇ ತಗೊಳ್ಬೇಕಿತ್ತು ಎಂದು ಗುರೂಜಿ ಅತ್ತರು. ಈ ವೇಳೆ ಭಾವುಕರಾದರು.
Sign in to your account
Username or Email Address


Password

 Remember Me


