ಮಂಡ್ಯ: ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತೆ ಅನ್ನೋ ನಂಬಿಕೆ ಡಿ.ಕೆ.ಶಿವಕುಮಾರ್‌ಗೆ (DK Shivakumar) ಯಾಕಿದೆ? ಕಾಂಗ್ರೆಸ್ಸಿನ ಸಮೀಕ್ಷೆ ತಗೊಂಡು ಡಿಕೆಶಿ ಚಿನ್ನದ ತಗಡು ಹೊಡೆಸಿಕೊಂಡು ಮನೆ, ಕಚೇರಿಯಲ್ಲಿ ಹಾಕೊಳ್ಳಲಿ. ಅವರು ಈ ಬಾರಿಗೆ ಗೆಲ್ಲೋದು 50 ರಿಂದ 70 ಸೀಟ್. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‍ಡಿಕೆ, ಜೆಡಿಎಸ್‍ನ (JDS) ಸಾಮರ್ಥ್ಯ ಹಳೆ ಮೈಸೂರು ಭಾಗದಲ್ಲಿ ಮಾತ್ರ. ನಮ್ಮ ಪೈಪೋಟಿ ಬಿಜೆಪಿ ಜೊತೆ ಮಾತ್ರ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗೆ ಇದೆ ಎನ್ನುವುದು ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ (BJP) ನಡುವೆ ನೇರ ಸ್ಪರ್ಧೆ ಇದೆ ಅದು ಚುನಾವಣೆ ಗೆಲ್ಲುವುದಕ್ಕೆ ಅಲ್ಲ. ಅಧಿಕಾರಕ್ಕೇ ಬಂದ್ರೆ ಎಷ್ಟು ಪರ್ಸಂಟೇಜ್ ಪಡೆಯಬೇಕು ಅನ್ನೋದಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿರಾಣಿ ನನ್ನ ಮುಂದೆ ಬಚ್ಚಾ, ಇಂತವರನ್ನ ಸಿಎಂ ಮಾಡಿದ್ರೆ ವಿಧಾನಸೌಧಕ್ಕೆ ಅವಮಾನ: ಯತ್ನಾಳ್ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆದಿದೆ ಅಷ್ಟೇ. ಈ ಬಾರಿ ಕಾಂಗ್ರೆಸ್ ಅವರಿಗೆ ಗೆಲ್ಲುವ ಶಕ್ತಿ ಇರೋದು 50-70 ಸೀಟ್ ಅಷ್ಟೇ. ಸಂಪೂರ್ಣ ಬಹುಮತ ಬರುತ್ತೆ ಎನ್ನುವ ಕಾಂಗ್ರೆಸ್ಸಿಗರು, ಜೆಡಿಎಸ್‍ನ ಹಲವರ ಮನೆ ಕಾಯುತ್ತಿದ್ದಾರೆ. ಇವತ್ತು ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ರಾಜ್ಯದಲ್ಲಿ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೆ. ನಮ್ಮ ಸರ್ಕಾರ ಬರೋದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯುವುದಕ್ಕೆ ಆಗಲ್ಲ. ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಭದ್ರತೆ – ಬೆಂಗಳೂರು ಪೊಲೀಸರಿಗೆ 35 ಅಂಶಗಳ ಟಾಸ್ಕ್‌ ಕೊಟ್ಟ ಕಮಿಷನರ್
Sign in to your account
Username or Email Address


Password

 Remember Me


