ಗದಗ: ನನ್ನ ಭವಿಷ್ಯದ ರಾಜಕೀಯ ಹಾಗೂ ಖಾಸಗಿ ಜೀವನ ರೂಪಿಸಲು ಆಶಿರ್ವಾದ ಪಡೆಯಲು ಬಂದಿದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದರು.ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ಅವರು, ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕೀಯ ಜೀವನದಲ್ಲಿ, ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ನಾನು ತೊಡಗಡಿಸಿಕೊಳ್ಳಲು ನಿಶ್ಚಯ ಮಾಡಿಕೊಂಡು ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಬಳ್ಳಾರಿ (Ballari) ನಂತರ ಅತೀ ಹೆಚ್ಚು ಅನುಬಂಧವಿರುವುದು ಗದಗ (Gadag) ನಗರದಲ್ಲಿ. ಇಲ್ಲಿ ಬಂದಾಗ ಬಳ್ಳಾರಿಯಲ್ಲೇ ಇದ್ದೀನಿ ಎಂಬ ತೃಪ್ತಿ ಹಾಗೂ ಸಂತೋಷ ಸಿಗುತ್ತದೆ ಎಂದು ತಿಳಿಸಿದರು.ನನ್ನದು ಬಳ್ಳಾರಿಯಿಂದ ಹೊರಗಡೆ ಒರುವ ಪರಿಸ್ಥಿತಿ ಇದೆ. ಪದೇ ಪದೇ ಬೆಂಗಳೂರಿನಲ್ಲಿ ಹೋಗಿ ಉಳಿದುಕೊಳ್ಳಲು ಆಗಲ್ಲ. ಇಲ್ಲಿನ ಬಿಸಿಲು, ಗಾಳಿ ನನ್ನ ಮೇಲೆ ಬೀಳಬೇಕು. ಈ ವಾತಾವರಣ ನನ್ನ ದೇಹಕ್ಕೆ, ಮನಸ್ಸಿಗೆ ತೃಪ್ತಿ ಕೊಡುತ್ತದೆ. ಉತ್ತರ ಕರ್ನಾಟಕದಲ್ಲಿ ಓಡಾಡಿದ್ರೆ ಸಿಗುವ ಖುಷಿಯೇ ಬೇರೆ. ಕಳೆದ 12 ವರ್ಷಗಳ ಕಾಲ ವನವಾಸದ ಜೀವನ ಅನುಭವಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ತೋಡಗಿಕೊಳ್ಳಲು ತೀರ್ಮಾನ ಮಾಡಿದ್ದು, ಜನರ ಪ್ರೀತಿ ಎಲ್ಲಿ ಸಿಗುತ್ತದೆ ಅಲ್ಲಿ ಹೆಚ್ಚು ಓಡಾಟ ಮಾಡುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ 2ನೇ ಬಾರಿ ಗದಗ ನಗರಕ್ಕೆ ಭೇಟಿ ನೀಡಿದ್ದೇನೆ. ಮುಂದಿನ ಒಂದು ವರ್ಷದಲ್ಲಿ 200 ಬಾರಿಯೂ ಭೇಡಿ ನೀಡುವುದನ್ನು ನೀವು ನೋಡಬಹುದು ಎಂದರು.ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಹಾಗೂ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಕಣ್ಣಾರೆ ಕಂಡಿದ್ದೇನೆ. ಅವರ ಪಾದಸ್ಪರ್ಶದೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ನನ್ನ ಹಾಗೂ ಶ್ರೀರಾಮುಲು ಅವರ ಪೂರ್ವ ಜನ್ಮದ ಪುಣ್ಯ ಎಂದಿ ನೆನಪಿಸಿಕೊಂಡರು. ಇದನ್ನೂ ಓದಿ: ತೆರಿಗೆ, ನೀರಿನ ಬಿಲ್ ಪಾವತಿಸಿ – ತಾಜ್ ಮಹಲ್‍ಗೆ ನೋಟಿಸ್ಶ್ರೀರಾಮುಲು ಗದಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿ, ಕಿತ್ತೂರು ಚೆನ್ನಮ್ಮ, ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮೂರ್ತಿಗಳು ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತೋಂಟದ ಶ್ರೀಗಳು ಭೀಷ್ಮ ಕೆರೆ ಆವರಣದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಿಸಲು ಸಲಹೆ ನೀಡಿದಾಗ ಅತ್ಯಂತ ಸಂತೋಷದಿಂದ ಬಸವೇಶ್ವರ ಪುತ್ಥಳಿ ನಿರ್ಮಿಸಲಾಯಿತು. ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಗದಗ ನಗರದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು ಎಂದರು.ಮುಂಬರುವ ಚುನಾವಣೆಯಲ್ಲಿ ಗದಗದಿಂದ ಸ್ಪರ್ಧಿಸುವ ಯೋಜನೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಜನಾರ್ದನ ರೆಡ್ಡಿ ಅವರು, ಡಿ. 25ರಂದು ಬೆಂಗಳೂರಿನಲ್ಲಿ ಮಾಧ್ಯಮದವರ ಮೂಲಕ ಕರ್ನಾಕಟದ ಜನತೆಗೆ ನನ್ನ ಮನದಾಳದ ಮಾತುಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.ಇದೇ ವೇಳೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ಪಂಚಾಕ್ಷರಿ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಹಾನಗಲ್‌ ಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು. ಇದನ್ನೂ ಓದಿ: ಗಡಿ ವಿವಾದ – ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್ನಂತರ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರು. ನಂತರ ಅನುಭವ ಮಂಟಪಕ್ಕೆ ಭೇಟಿ ನೀಡಿ‌ ಬಸವಣ್ಣನವರ ಜೀವನ ಚರಿತ್ರೆ ಹೊಂದಿದ ಅನುಭವ ಮಂಟಪ ವಿಕ್ಷಣೆ ಮಾಡಿದರು. ನಂತರ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲ ನಿಮಿಷಗಳ ಕಾಲ ರಾಜಕೀಯ ಜೀವನದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಶ್ರೀಗಳು ಗಾಲಿ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಿದರು.
Sign in to your account
Username or Email Address


Password

 Remember Me


