– ಇದೇ ಬೆಕ್ಕಿನಿಂದ ಕಚ್ಚಿಸಿಕೊಂಡಿದ್ದ ನಾಯಿಯೂ ಮೃತಪಟ್ಟಿತ್ತು!ಶಿವಮೊಗ್ಗ: ಸಾಕಿದ ಬೆಕ್ಕೊಂದು (Cat) ಕಚ್ಚಿ ಮಹಿಳೆ (Women) ಸಾವಿಗೀಡಾಗಿರುವ ಘಟನೆ ಶಿವಮೊಗ್ಗದ ತರಲಘಟ್ಟ ಕ್ಯಾಂಪ್‌ನಲ್ಲಿ ನಡೆದಿದೆ. ಇದನ್ನೂ ಓದಿ:ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು, ಅವರ ಕುಟುಂಬಕ್ಕೆ: ಸಿಎಂ ವಾಗ್ದಾಳಿಬೆಕ್ಕು ಕಚ್ಚಿದ್ದಕ್ಕೆ ಗಂಗೀಬಾಯಿ (50) ಎಂಬವರು ಮೃತಪಟ್ಟಿದ್ದಾರೆ. ಕಳೆದ 3 ತಿಂಗಳ ಹಿಂದೆ ಬೆಕ್ಕು ಮಹಿಳೆಯ ಕಾಲಿಗೆ ಕಚ್ಚಿತ್ತು. ಬಳಿಕ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಮಹಿಳೆ 1 ಇಂಜೆಕ್ಷನ್‌ಗೆ ಕಾಯಿಲೆ ಗುಣವಾಯಿತು ಎಂದು ಸುಮ್ಮನಾದರು.ಚೇತರಿಕೆಯ ನಂತರ ಕೃಷಿ ಚಟುವಟಿಕೆಯಲ್ಲಿ ಮಹಿಳೆ ಭಾಗಿಯಾದರು. ಬೆಕ್ಕು ಕಚ್ಚಿದರೆ ರೇಬಿಸ್ ಕಾಯಿಲೆ ಬರುವ ಸಾಧ್ಯತೆ ಕೂಡ ಇರುತ್ತದೆ. ಇದರ ನಿರ್ಲಕ್ಷ್ಯದ ಪರಿಣಾಮ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.ಅಂದಹಾಗೆ, ಬೆಕ್ಕು ಮಹಿಳೆಗೆ ಕಚ್ಚುವ ಮುನ್ನ ನಾಯಿಗೂ ಕಚ್ಚಿತ್ತು. ಆ ನಾಯಿ ಕೂಡ ಸಾವನ್ನಪ್ಪಿದೆ.Sign in to your account
Username or Email Address


Password

 Remember Me


