ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ (Suicide Case) ಹೆಚ್ಚಾಗುತ್ತಿದೆ. ಆ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.ವಿವಿ ಪುರಂನಲ್ಲಿರುವ ಖಾಸಗಿ ಕಾಲೇಜು ಕಟ್ಟಡದ 6ನೇ ಮಹಡಿಯಿಂದ ಜಿಗಿದು ವಾಣಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲರನ್ನೂ ಪ್ರೀತಿಸುವುದು, ಒಟ್ಟಿಗೆ ಬಾಳುವುದು ಮಾನವೀಯತೆಯ ಗುರುತು – ಕ್ರೈಸ್ತ ನಮನ ಕಾರ್ಯಕ್ರಮದಲ್ಲಿ ಗೆಹ್ಲೋಟ್ಕಾನೂನು ವಿಭಾಗದ ವಿದ್ಯಾರ್ಥಿನಿಯಾಗಿದ್ದ (Law Student) ತ್ಯಾಗರಾಜನಗರದ ನಿವಾಸಿ ವಾಣಿ ಆತ್ಮಹತ್ಯೆಗೆ ಎಂಗೇಜ್ಮೆಂಟ್‌ ಬ್ರೇಕಪ್ ಕಾರಣ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಕಳ್ಳತನ ಕೇಸ್‍ನಲ್ಲಿ ಅರೆಸ್ಟ್ ಮಾಡಿಲ್ಲ – ಎರಡನೇ ಮದುವೆ ಕೂಡ ಆಗಿಲ್ಲ: ಅಟ್ಟಿಕಾ ಬಾಬು ಸ್ಪಷ್ಟನೆಆತ್ಮಹತ್ಯೆ ಸ್ಥಳದಲ್ಲಿ ಡೆತ್‌ನೋಟ್ (Death Note) ಸಿಕ್ಕಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಅಂಶ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Sign in to your account
Username or Email Address


Password

 Remember Me


