ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಶೂಟಿಂಗ್‌ಗೆ ಬ್ರೇಕ್ ಹಾಕಿ, ಮಂಗಳೂರಿಗೆ ಬಂದಿದ್ದಾರೆ. ತಮ್ಮ ಮನೆಯ ಭೂತಕೋಲದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.`ಬಾಹುಬಲಿ 2′ (Bahubali 2) ಸಕ್ಸಸ್ ನಂತರ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್‌ ಆಗಿದ್ದಾರೆ. ಆದರೆ ಈಗ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೆ ಸಜ್ಜಾಗಿರುವ ಬೆನ್ನಲ್ಲೇ ತಮ್ಮ ಮನೆಯ ಪಂಜುರ್ಲಿ ದೈವಕೋಲಕ್ಕೆ ಅನುಷ್ಕಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ. ನಟಿ ಮೂಲತಃ ಮಂಗಳೂರಿನವರಾಗಿದ್ದು, ಭೂತಕೋಲವನ್ನು ಮಾಡುತ್ತಾರೆ.Another glimpse of Sweety attending Boothakola Festival in her home town ❤️❤️✨✨#AnushkaShetty #Sweety #Anushka48 pic.twitter.com/XvwIXTnjha— PRANUSHKA FANCLUB ????❤️ (@pranushka_fan) December 18, 2022ಇನ್ನೂ ಇತ್ತೀಚೆಗೆ ಕಾಂತಾರ (Kantara) ಸಿನಿಮಾ ನೋಡಿ, ಖುಷಿಯಿಂದ ಚಿತ್ರಕ್ಕೆ ಮತ್ತು ರಿಷಬ್ ಶೆಟ್ಟಿ ನಟನೆಗೆ ಅನುಷ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂತಾರದಲ್ಲಿ ದೈವ ಕಥೆಯನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ತೋರಿಸಿದ್ದರು.
Sign in to your account
Username or Email Address


Password

 Remember Me


