ಬೆಂಗಳೂರು: ನೆಲಮಂಗಲದ (Nelamangala) ಪ್ರತ್ಯೇಕ 2 ಕಡೆಗಳಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು (Bike Accident) ದಾರುಣ ಸಾವಿಗೀಡಾಗಿದ್ದಾರೆ.ನೆಲಮಂಗಲ ಸಮೀಪದ ಮಾದವಾರ ಬಳಿ ಅಪಘಾತ ಸಂಭವಿಸಿದೆ. ದಾವಣಗೆರೆ ಮೂಲದ ಹರ್ಷ (29) ಮೃತಪಟ್ಟ ಬೈಕ್‌ ಸವಾರ. ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಬೈಕ್ ಸವಾರ ಲಾರಿ ಕೆಳಗೆ ಸಿಲುಕಿದ್ದಾನೆ. ಚಕ್ರದಡಿ ಸಿಲುಕಿದ್ದ ಸವಾರನನ್ನು ಲಾರಿ ಚಾಲಕ 200 ಮೀಟರ್‌ ದೂರ ಎಳೆದೊಯ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಎಂಗೇಜ್ಮೆಂಟ್ ನಿಂತು ಹೋಗಿದ್ದಕ್ಕೆ ಬೆಂಗ್ಳೂರಲ್ಲಿ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ ಈತ ಮನೆಗೆ ವಾಪಸ್‌ ಆಗುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ನೆಲಮಂಗಲ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಅಪಘಾತ ನೆಲಮಂಗಲದ ಕುಣಿಗಲ್‌ ಬೈಪಾಸ್‌ ಬಳಿ ಸಂಭವಿಸಿದೆ. ಸಿಂಗಾಪುರ ಗ್ರಾಮದ ಕೃಷ್ಣಪ್ಪ ಮೃತಪಟ್ಟ ಬೈಕ್‌ ಸವಾರ. ಈತ ಬೈಕ್‌ನಲ್ಲಿ ಬರುವಾಗ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್‌ನಿಂದ ಬಿದ್ದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಪಾದಾಚಾರಿಗೆ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್
Sign in to your account
Username or Email Address


Password

 Remember Me


