ನಟಿ ದೆವೊಲೀನಾ ಭಟ್ಟಾಚಾರ್ಜಿ (Devoleena) ಇತ್ತೀಚಿಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟರು. ಜಿಮ್ ಟ್ರೈನರ್ ಶಹನವಾಜ್ ಶೇಖ್ (Shanawaz) ಜೊತೆ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ದೆವೊಲೀನಾ ಮದುವೆಯಾದ ಬೆನ್ನಲ್ಲೇ ಟ್ರೋಲ್‌ಗೆ ಗುರಿಯಾದರು. ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಮುಸ್ಲಿಂ ಧರ್ಮದ ವ್ಯಕ್ತಿಯನ್ನು ನಟಿ ಮದುವೆಯಾಗಿದ್ದಕ್ಕೆ ನಿಮ್ಮ ಮಕ್ಕಳು ಯಾವ ಧರ್ಮಕ್ಕೆ ಸೇರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್ ಮೂಲಕ ನಟಿ ಕೂಡ ಖಡಕ್ ಉತ್ತರ ಕೊಟ್ಟಿದ್ದಾರೆ.ನಾನು ಚೆನ್ನಾಗಿದ್ದೇನೆ ಅಥವಾ ಇಲ್ಲವಾ ಎಂದು ಯಾರೂ ಕೂಡ ತಲೆಕೆಡಿಸಿಕೊಳ್ಳದಿರುವಾಗ ನೀನು ನನ್ನ ಜೊತೆಗಿದ್ದಕ್ಕಾಗಿ ಧನ್ಯವಾದಗಳು ಶೋನು. ನಾನು ಬಯಸಿದ ರೀತಿಯಲ್ಲಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ನಿನ್ನ ಕಾಳಜಿ ಮತ್ತು ಪ್ರೀತಿಗಾಗಿ ಧನ್ಯವಾದಗಳು ಎಂದು ಹೇಳುದ್ದಾರೆ. ಈ ಮೂಲಕ ತುಂಬಾ ಪ್ರೀತಿ ನೀಡುತ್ತಿರುವ ಪತಿಗೆ ಧನ್ಯವಾದ ಹೇಳುವ ಮೂಲಕ ಟ್ರೋಲಿಗೆ ಉತ್ತರ ನೀಡಿದ್ದಾರೆ. ನಟಿ ದೆವೊಲೀನಾ ಡಿ.14ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  A post shared by Devoleena Bhattacharjee (@devoleena)ಇನ್ನೂ ಮದುವೆ (Wedding) ಫೋಟೋ ಶೇರ್ ಮಾಡುತ್ತಿದ್ದಂತೆ ಅನೇಕರು ಟ್ರೋಲ್ ಮಾಡಿದ್ದರು. ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದೀರಾ, ಮುಂದೆ ನಿಮ್ಮ ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇದಕ್ಕೆ ದೆವೊಲೀನಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: `ಯಶ್ ಇಸ್ ವಾವ್’ ಎಂದ ಶಾರುಖ್ ಖಾನ್ ರಿಯಾಕ್ಷನ್‌ಗೆ ಯಶ್ ಫ್ಯಾನ್ಸ್ ಫಿದಾ  A post shared by Devoleena Bhattacharjee (@devoleena)ನನ್ನ ಮಕ್ಕಳು ಹಿಂದೂ ಅಥವಾ ಮುಸ್ಲಿಂ ಎಂದು ಕೇಳುವುದಕ್ಕೆ ನೀವು ಯಾರು? ನಿಮಗೆ ನಿಜವಾಗಿಯೂ ಮಕ್ಕಳ ಬಗ್ಗೆ ಕಾಳಜಿ ಇದ್ದರೆ, ಅನೇಕ ಅನಾಥಾಶ್ರಮಗಳಿವೆ. ನೀವು ಅಲ್ಲಿಗೆ ಹೋಗಿ. ಮಗುವನ್ನು ದತ್ತು ಪಡೆಯಿರಿ ಬಳಿಕ ಹೆಸರು ಮತ್ತು ಧರ್ಮವನ್ನು ನಿರ್ಧರಿಸಿ. ನನ್ನ ಪತಿ, ನನ್ನ ಮಕ್ಕಳು, ನನ್ನ ಧರ್ಮ. ನೀವು ಯಾರು ಕೇಳೋಕೆ ಎಂದು ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


