ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೇ ಟ್ರೋಲ್ ಆದರು ರಶ್ಮಿಕಾ ಮಂದಣ್ಣ (Rashmika Mandanna) ಭಾರಿ ಸುದ್ದಿಯಲ್ಲಿದ್ದಾರೆ. ಬ್ಯಾನ್ ವದಂತಿ, ನಾನ್‌ಸ್ಟಾಪ್ ಟ್ರೋಲ್‌ಗೆ ಡೊಂಟ್ ಕೇರ್ ಎನ್ನದೇ ತಮ್ಮ ಸಿನಿಮಾಗಳ ಮೂಲಕ `ಪುಷ್ಪ’ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ(Ramya), ರಚಿತಾರನ್ನೇ (Rachitha Ram) ಸೆಡ್ಡು ಹೊಡೆದು ಈ ವರ್ಷದ ನಂಬರ್ ಒನ್ ನಟಿಯಾಗಿ ರಶ್ಮಿಕಾ ಹೊರಹೊಮ್ಮಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವು ಖಾಸಗಿ ಮಾಧ್ಯಮವೊಂದು ನವೆಂಬರ್‌ ತಿಂಗಳಲ್ಲಿ ಅತೀ ಹೆಚ್ಚು ಬಾರಿ ಸುದ್ದಿಯಲ್ಲಿದ್ದ ಕನ್ನಡದ ನಟಿಮಣಿಯರ ಪಟ್ಟಿ ರಿಲೀಸ್ ಮಾಡಿದೆ. ಈ ಸಮೀಕ್ಷೆ ಪ್ರಕಾರ ಕನ್ನಡದ ಟಾಪ್ ನಟಿಯರನ್ನೇ ಸೆಡ್ಡು ಹೊಡೆದು ರಶ್ಮಿಕಾ ನಂಬರ್ ಒನ್ ನಟಿಯಾಗಿದ್ದಾರೆ. ಇದನ್ನೂ ಓದಿ:`ಯಶ್ ಇಸ್ ವಾವ್’ ಎಂದ ಶಾರುಖ್ ಖಾನ್ ರಿಯಾಕ್ಷನ್‌ಗೆ ಯಶ್ ಫ್ಯಾನ್ಸ್ ಫಿದಾವರ್ಷವಿಡೀ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ರಶ್ಮಿಕಾ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೊಡಗಿನ ಕುವರಿಗೆ ನೆಟ್ಟಿಗರು ಕಿರಿಕಿರಿ ಮಾಡಿದ್ದರು. ರಶ್ಮಿಕಾ ಕೊಟ್ಟ ಒಂದೊಂದು ಹೇಳಿಕೆಯನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಇಷ್ಟೊಂದು ಟೀಕೆಗೆ ಗುರಿಯಾಗಿದ್ದರೂ,  ಅತೀ ಹೆಚ್ಚು ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ.ಇನ್ನೂ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ರಮ್ಯಾ, ಮೂರನೇ ಸ್ಥಾನ ರಚಿತಾ ರಾಮ್, ನಾಲ್ಕನೇ ಸ್ಥಾನ ರಾಧಿಕಾ ಪಂಡಿತ್ (Radhika Pandit), ಐದನೇ ಸ್ಥಾನ `ಕೆಜಿಎಫ್ 2′ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಆವರಿಸಿಕೊಂಡಿದ್ದಾರೆ. ಒಟ್ನಲ್ಲಿ ಯಾರು ಅದೆಷ್ಟೇ ಟ್ರೋಲ್ ಮಾಡಿ ಕಿಡಿಕಾರಿದ್ದರು ರಶ್ಮಿಕಾ ಮಾತ್ರ ತಮ್ಮ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.
Sign in to your account
Username or Email Address


Password

 Remember Me


