ಕೋಲಾರ: ಆಟೋ ಓಡಿಸಿಕೊಂಡೆ ಈಗಾಗಲೇ ಮೂರು ಹುಡುಗಿಯರನ್ನು ಮದುವೆಯಾಗಿ ಮೋಸ ಮಾಡಿರುವ ಚಪಲ ಚೆನ್ನಿಗರಾಯ ಈಗ ಅಪ್ರಾಪ್ತ ಬಾಲಕಿಯೊಂದಿಗೆ ಪರಾರಿಯಾಗಿರುವ ಘಟನೆ ಕೋಲಾರ ತಾಲೂಕಿನ ನರಸಾಪುರದಲ್ಲಿ ನಡೆದಿದೆ.ಕೋಲಾರ (Kolar) ತಾಲೂಕಿನ ನರಸಾಪುರ ಗ್ರಾಮದ ಆಟೋ ಚಾಲಕ (Auto Driver) ಅಲಿಯಾಸ್ ಸಂತೋಷ್ ಎಂಬಾತ ನಿತ್ಯ ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು (Girl) ಪುಸಲಾಯಿಸಿ ಆಕೆಯನ್ನು ಕರೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.ಸಂತೋಷ್ ನರಸಾಪುರ ಗ್ರಾಮದಲ್ಲೇ ಆಟೋ ಓಡಿಸಿಕೊಂಡಿದ್ದು, ನಿತ್ಯ ಕೂಲಿ ಕೆಲಸದವರನ್ನು ಕೆರೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಈ ಬಾಲಕಿ ಹಾಗೂ ಆಕೆಯ ಅಜ್ಜಿ ಕೂಡಾ ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಡಿ. 5ರಂದು ಬಾಲಕಿಯ ಅಜ್ಜಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ಈ ವೇಳೆ ಬಾಲಕಿಯನ್ನು ಪುಸಲಾಯಿಸಿರುವ ಸಂತೋಷ್ ಕರೆದುಕೊಂಡು ನಾಪತ್ತೆಯಾಗಿದ್ದಾನೆ.ಕೆಲಸಕ್ಕೆಂದು ಹೋದ 17 ವರ್ಷದ ಬಾಲಕಿ ಮತ್ತೆ ವಾಪಸ್ ಬಂದಿಲ್ಲ, ಎಲ್ಲಿ ಹೋಗಿದ್ದಾಳೆ ಎಂದು ಪರಿಶೀಲನೆ ನಡೆಸಲಾಗಿ, ಬಾಲಕಿಯನ್ನು ಆಟೋ ಡ್ರೈವರ್ ಸಂತೋಷ್ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎನ್ನುವುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡಲೇ ಬಾಲಕಿಯ ಪೊಷಕರು ವೇಮಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಾಲಕಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.ಸಂತೋಷ್ ಹೀಗೆ ಮಾಡಿರುವುದು ಮೊದಲೇನಲ್ಲ. ಈ ಮೊದಲು ಇದೇ ರೀತಿ ಹುಡುಗಿಯರನ್ನು ಪುಸಲಾಯಿಸಿ ಈಗಾಗಲೇ ಮೂರು ಜನರನ್ನು ಮದುವೆಯಾಗಿದ್ದಾನಂತೆ. ಅದರಲ್ಲಿ ಒಬ್ಬ ಹೆಂಡತಿ ಮೃತಪಟ್ಟಿದ್ದು, ಉಳಿದ ಇಬ್ಬರು ಇವನೊಂದಿಗೆ ಸಂಸಾರ ಮಾಡಲಾರದೆ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ ನಗರ ಬಂದ್‌ – ಕೆಎಸ್‍ಆರ್‌ಟಿಸಿ ಸಂಚಾರ ಇಳಿಮುಖಈತನ ಮೂರನೇ ಪತ್ನಿ ಕೂಡಾ ಬಾಲಕಿಯೊಂದಿಗೆ ನಾಪತ್ತೆಯಾಗಿರುವ ತನ್ನ ಗಂಡನ ಕುರಿತು ಪೊಲೀಸ್ ಠಾಣೆಗೆ ಹೋಗಿ ಹೇಳಿಕೆ ನೀಡಿ ಬಂದಿದ್ದಾರೆ. ಸದ್ಯ ಬಾಲಕಿಯೊಂದಿಗೆ ನಾಪತ್ತೆಯಾಗಿರುವ ಸಂತೋಷ್ ಆಕೆಯೊಂದಿಗೆ ಇರುವ ಕೆಲವು ಪೋಟೋಗಳನ್ನು ಸ್ಥಳೀಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ಹಾಗಾಗಿ ನಮ್ಮ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿರುವ ಸಂತೋಷನನ್ನು ಬಂಧಿಸಿ ನಮ್ಮ ಮಗುವನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ?
Sign in to your account
Username or Email Address


Password

 Remember Me


