ಬಿಗ್ ಬಾಸ್ ಮನೆಯ (Bigg Boss House) ಆಟ 85 ದಿನಗಳನ್ನ ಪೂರೈಸಿ ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಹಾಗೆಯೇ ಕಿಚ್ಚನ ವಾರದ ಪಂಚಾಯಿತಿಯಲ್ಲಿ ಅಚ್ಚರಿಯ ವಿಷ್ಯವೊಂದರ ಬಗ್ಗೆ ಚರ್ಚೆಯಾಗಿದೆ. ಮನೆಯ ʻಮಿಸ್ಟರ್ ಗರಗಸʼ (Mr.Garagasa) ಯಾರು ಎಂಬುದರ ಬಗ್ಗೆ ಗುರೂಜಿಯನ್ನೇ ಸೆಡ್ಡು ಹೊಡೆದು ರೂಪೇಶ್ ರಾಜಣ್ಣ (Roopesh Rajanna) ಬಹುಮತ ಗಳಿಸಿದ್ದಾರೆ.ಕಿಚ್ಚನ ಸಂಡೇ ಮಾತುಕತೆ ನೋಡುಗರನ್ನ ಮತ್ತಷ್ಟು ಅಟ್ರಾಕ್ಟ್ ಮಾಡಿದೆ. ಈ ವಾರ ಮನೆಯ ಮಿಸ್ಟರ್ ಗರಗಸ ಯಾರು ಎಂದು ಕಿಚ್ಚ (Kiccha Sudeep) ಸ್ಪರ್ಧಿಗಳ ಜೊತೆ ಚರ್ಚೆ ಮಾಡಿದ್ದಾರೆ. ಮನೆಯಲ್ಲಿ ಹೇಳಿದನ್ನೇ ರಿಪೀಟ್ ಆಗಿ ಯಾರು ಹೇಳ್ತಾರೆ ಎಂದು ಮಾತನಾಡಿದ್ದಾರೆ.ಈ ವೇಳೆ ಒಂದಿಷ್ಟು ಸ್ಪರ್ಧಿಗಳು ಆರ್ಯವರ್ಧನ್ ಗುರೂಜಿ ಅವರ ಹೆಸರನ್ನ ಹೇಳಿದ್ರೆ, ಕೆಲ ಮಂದಿ ರೂಪೇಶ್ ರಾಜಣ್ಣಗೆ ಹೇಳಿದ್ದಾರೆ. ಆಗ ರೂಪೇಶ್ ಶೆಟ್ಟಿ ಹೇಳಿರುವ ಮಾತು ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಎಷ್ಟೋ ದಿನಗಳ ಹಿಂದೆ ಆಡಿರುವ ಮಾತು ಅವರ ನೆನಪಿನಲ್ಲಿ ಇರುತ್ತದೆ. ಸಮಯ, ಸಂದರ್ಭ ಬಂದಾಗ ಅವತ್ತು ನನಗೆ ಹಾಗೇ ಮಾತನಾಡಿದ್ರಿ ಎಂದು ರಾಜಣ್ಣ ಕ್ಲಾಸ್ ತೆಗೆದುಕೊಳ್ತಾರೆ. ಅದೆಷ್ಟು ಬಾರಿ ಗುರೂಜಿ ಮತ್ತು ರಾಜಣ್ಣ ನಡುವೆ ಸಂಭಾಷಣೆ ನಡೆದಿದೆ ಎಂದು ಹಾಸ್ಯಮಯವಾಗಿ ರೂಪೇಶ್ ಶೆಟ್ಟಿ ಈ ವೇಳೆ ಹೇಳಿದ್ದಾರೆ. ಇದನ್ನೂ ಓದಿ: ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ದೆವೊಲೀನಾಕನ್ನಡ ಪರ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ರೂಪೇಶ್ ರಾಜಣ್ಣ ಅವರ ಆಟ ಜನರಿಗೆ ಇಷ್ಟವಾಗಿದೆ. ರಿಯಾಲಿಟಿ ಶೋಗೆ ಇದೇ ಬಾರಿಗೆ ಬಂದಿರುವ ರಾಜಣ್ಣ ದೊಡ್ಮನೆಯಲ್ಲಿ ಇತರೆ ಸ್ಪರ್ಧಿಗಳಿಗೆ ಪೈಪೋಟಿ ಕೊಟ್ಟು 85 ದಿನಗಳನ್ನ ಪೂರೈಸಿದ್ದಾರೆ.
Sign in to your account
Username or Email Address


Password

 Remember Me


