ಮಡಿಕೇರಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ. ಅವರ ಮೆದುಳು ಮತ್ತು ನಾಲಿಗೆಗೆ ಕಂಟ್ರೋಲ್ ತಪ್ಪಿದೆ ಎಂದು ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್ (H Vishwanath) ವಿರುದ್ಧ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (KG Bopaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೋಟರ್ ಐಡಿ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ (BJP) ಶಾರೀಕ್ ಪ್ರಕರಣ ಬಳಸಿಕೊಂಡಿದೆ ಎಂಬ ಡಿಕೆಶಿ (DK Shivakumar) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ವಿಶ್ವನಾಥ್ ವಿರುದ್ಧ ಮಡಿಕೇರಿಯಲ್ಲಿ ಮಾತಾನಾಡಿದ ಬೋಪಯ್ಯ, ಯಾವುದೋ ಕಾರಣಕ್ಕೆ ತಲೆ ಕೆಟ್ಟವರನ್ನು ಸರಿಮಾಡಬಹುದು. ಪೂರ್ತಿ ತಲೆ ಕೆಟ್ಟಿರದಿದ್ದರೂ ತಲೆ ಕೆಟ್ಟವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಹ ವ್ಯಕ್ತಿತ್ವ ಹೊಂದಿರುವವರು ವಿಶ್ವನಾಥ್. ಈ ತಲೆ ಕೆಟ್ಟವರ ಬಗ್ಗೆ ಏನು ಮಾತನಾಡುವುದು? ಅಂಥವರನ್ನು ನೆಗ್ಲೆಟ್ ಮಾಡಬೇಕು ಎಂದು ಬೋಪಯ್ಯ ಹೇಳಿಕೆ ನೀಡಿದರು.ಹೆಚ್ ವಿಶ್ವನಾಥ್ ಅವರು ಪಾರ್ಲಿಮೆಂಟ್ ಸದಸ್ಯರಾಗಿದ್ದವರು. ಬಿಜೆಪಿಯಿಂದ ಎಲ್ಲವನ್ನೂ ಅನುಭವಿಸಿ ಇದೀಗ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ. ಅವರ ಮೆದುಳು ಮತ್ತು ನಾಲಿಗೆಗೆ ಕಂಟ್ರೋಲ್ ತಪ್ಪಿದೆ ಎಂದು ವಿಶ್ವನಾಥ್ ವಿರುದ್ಧ ಬೋಪಯ್ಯ ಖಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ: ಅಶೋಕ್‍ಗೆ ಆಹ್ವಾನ ನೀಡಿದ ಡಿಕೆಶಿಚುನಾವಣೆ ಎದುರಿಸಲು ಬಿಜೆಪಿಯಿಂದ 15 ಕೋಟಿ ರೂ. ವಿಶ್ವನಾಥ್ ಅವರಿಗೆ ನೀಡಲಾಗಿತ್ತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ದೃಷ್ಟಿಯಿಂದ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ತುಂಬ ಹಿರಿಯರಿದ್ದಾರೆ. ಅವರು ತುಂಬಾ ತೂಕದ ಮಾತುಗಳನ್ನು ಆಡುತ್ತಾರೆ. ಅವರು ಏಕಾಏಕಿ ಆ ರೀತಿಯ ಹೇಳಿಕೆ ಕೊಡುವವರಲ್ಲ. ಶ್ರೀನಿವಾಸ್ ಪ್ರಸಾದ್ ಒಬ್ಬ ಸಜ್ಜನರು ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲಾತಿ ಕೊಡದಿದ್ದರೆ ಅಧಿವೇಶನದಲ್ಲೇ ಸುವರ್ಣ ಸೌಧಕ್ಕೆ ಮುತ್ತಿಗೆ – ಸರ್ಕಾರಕ್ಕೆ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
Sign in to your account
Username or Email Address


Password

 Remember Me


