ಬಿಗ್ ಬಾಸ್ ಮನೆಯ (Bigg Boss House) ಆಟ ಇದೀಗ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. ಹೀಗಿರುವಾಗ ಕಿಚ್ಚನ ಪಂಚಾಯಿತಿಯಲ್ಲಿ ಆರ್ಯವರ್ಧನ್ ಗುರೂಜಿ(Aryavardan Guruji), ಸುದೀಪ್‌ಗೆ (Sudeep) ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಕಿಚ್ಚನಿಗಾಗಿಯೇ ಬಿಗ್ ಬಾಸ್ ಮನೆಯಲ್ಲಿ ಕಥೆ ಬರೆದಿದ್ದೇನೆ ಎಂದು ಮಾತನಾಡಿದ್ದಾರೆ.ಕಿಚ್ಚನನ್ನು ನೋಡಲು ವೀಕೆಂಡ್‌ಗಾಗಿ ಕಾದು ಕೂರುವ ಅಭಿಮಾನಿಗಳಿದ್ದಾರೆ. ವಾರಾಂತ್ಯದ ಪಂಚಾಯಿತಿಯಲ್ಲಿ ಈ ವೇಳೆ ಇಂಟರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ನಿಮಗಾಗಿ ಒಂದು ಕಥೆ ಬರೆದಿದ್ದೇನೆ. ನೀವು ನಟಿಸಬೇಕು ಎಂದು ಗುರೂಜಿ ಕೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ (K.p Srikanth) ಜೊತೆ ಬಂದು ನಿಮ್ಮನ್ನ ಭೇಟಿ ಮಾಡುತ್ತೇನೆ. ಕಥೆ ಹೇಳುತ್ತೇನೆ ಎಂದು ಸುದೀಪ್‌ಗೆ ಹೇಳಿದ್ದಾರೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿನನ್ನ ಕಥೆಯಲ್ಲಿ ನೀವು ನಟಿಸಬೇಕು ಎಂದು ಮನವಿ ಮಾಡಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತೇವೆ. ಇದೊಂದು ದೆವ್ವದ ಕಥೆಯಾಗಿದ್ದು, ಹೀರೋನೂ ನೀವೇ, ದೆವ್ವನೂ ನೀವೇ ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ಒನ್‌ಲೈನ್ ಸ್ಟೋರಿಗೆ ಸುದೀಪ್ ಕಿರುನಗೆ ಬೀರಿದ್ದಾರೆ. ಇವರಿಬ್ಬರ ಮಾತುಕಥೆ ಮನೆಮಂದಿಗೆ ಖುಷಿ ಕೊಟ್ಟಿದೆ. ಒಟ್ಟಿನಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾರಾ, ಶೋನಲ್ಲಿ ಇದು ಮಾತುಕಥೆಗಷ್ಟೇನಾ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.ಇನ್ನೂ ಗುರೂಜಿ ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಂದುವರೆಸಿದರೆ, ಅನುಪಮಾ ಗೌಡ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದಾರೆ.
Sign in to your account
Username or Email Address


Password

 Remember Me


