ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅಂತ ಹೆಸರಿಟ್ಟ ಸಿದ್ದರಾಮಯ್ಯ ಅವರ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ತಿರುಗೇಟು ನೀಡಿದರು.ಬಿಜೆಪಿ (BJP) ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ ಆಗಿದ್ದಾರೆ. ನಾನು ಶುದ್ಧ ಅಂತ ಹೇಳಿಕೊಳ್ಳಲೂ ಶುದ್ಧತೆ ಇರಬೇಕು ಸಿದ್ದರಾಮಯ್ಯ ಅವರೇ, ಶುದ್ಧತೆ ಇಲ್ಲದವರು ಬೆರಕೆಯ ರಾಜಕಾರಣಿ ಆಗ್ತಾರೆ ಹೊರತು, ಶುದ್ಧ ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬೆರಕೆ ರಾಜಕಾರಣಿ ಎಂದು ಟೀಕಿಸಿದರು.ಒಂದು ಜನಾಂಗಕ್ಕೆ ಮಾತ್ರ ಯೋಜನೆ ತರೋರಿಗೆ ಮತಾಂಧ ಅಂತಾರೆ. ಶಾದಿ ಭಾಗ್ಯ, ಶಾಲಾ ಪ್ರವಾಸ ಯೋಜನೆ ಯಾರಿಗಾಗಿ ತಂದ್ರಿ ಸಿದ್ದರಾಮಯ್ಯ?, ಸಬ್ ಕಾ ಸಾತ್ ರಾಜಕಾರಣ ಮಾಡಿದ್ದು ಬಿಜೆಪಿಯಾಗಿದ್ದು, ಮತಾಂಧತೆಯ ರಾಜಕಾರಣ ಮಾಡಿದ್ದು ಕಾಂಗ್ರೆಸ್ (Congress) ಎಂದ ಅವರು, ಬಿಜೆಪಿ ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ನಮ್ಮದು ಅಭಿವೃದ್ಧಿ ರಾಜಕಾರಣವಾಗಿದ್ದು, ನಮ್ಮ ತಾಕತ್ ಇರೋದೇ ಹಿಂದುತ್ವ, ಅಭಿವೃದ್ಧಿ ರಾಜಕಾರಣದಲ್ಲಾಗಿದೆ. ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.ಸಿದ್ದರಾಮಯ್ಯ ಅಂತ ಅವರ ತಂದೆ ಹೆಸರಿಟ್ಟರು, ಆದರೆ ಜನ ಅವರಿಗೆ ಇಟ್ಟ ಹೆಸರು ಸಿದ್ರಾಮುಲ್ಲಾ ಖಾನ್ ಆಗಿದೆ. ಸಿದ್ರಾಮುಲ್ಲಾ ಖಾನ್ ಅಂತ ನಾನು ಇಟ್ಟ ಹೆಸರಲ್ಲ, ರಾಜ್ಯದ ಜನ ಇಟ್ಟ ಹೆಸರು ಅದು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ: ಅಶೋಕ್‍ಗೆ ಆಹ್ವಾನ ನೀಡಿದ ಡಿಕೆಶಿಅಂದು ಸಿದ್ದರಾಮಯ್ಯ ಅವರು, ಕುಂಕುಮ ಕಂಡ್ರೆ, ಕೇಸರಿ ಕಂಡ್ರೆ ಭಯ ಅಂದ್ರು. ಶುದ್ಧ ಹಿಂದೂ ಈ ಥರ ಯಾವತ್ತೂ ನೀಚ ಕೆಲಸ ಮಾಡಲ್ಲ. ನಾವು ಆವತ್ತೂ ಕೇಸರಿ, ಇವತ್ತೂ ಕೇಸರಿ ಎಂದ ಅವರು, ರಾಜ್ಯದಲ್ಲಿ ಕೇಸರಿ ಗಾಳಿ ಇದೆ. ಮತ್ತೆ ಅಧಿಕಾರಕ್ಕೆ ಬರೋದು ಡಬಲ್ ಇಂಜಿನ್ ಸರ್ಕಾರವಾಗಿದೆ. ಕೇಸರಿ, ಕುಂಕುಮದ ವಿರುದ್ಧ ರಾಜಕಾರಣ ಮಾಡೋರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.ಇದೇ ವೇಳೆ ಡಿಕೆಶಿ (DK Shivakumar) ವಿರುದ್ಧ ಹರಿಹಾಯ್ದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಆರೋಪಿಗಳಿಗೆ ಡಿಕೆಶಿ ಅವರು ದೆ ಆರ್ ಮೈ ಬ್ರದರ್ಸ್ ಅಂದ್ರು, ಕುಕ್ಕರ್ ಮೇಲೆ ಡಿಕೆಶಿ ಅಣ್ಣನಿಗೆ ಪ್ರೀತಿ ಬಂದಿದೆ. ಕುಕ್ಕರ್ ಬಿರಿಯಾನಿ ಮಾಡಲು ತಗೊಂಡ್ ಹೋಗ್ತಿರ್ಲಿಲ್ಲ, ಬ್ಲಾಸ್ಟ್ ಮಾಡಲು ಕುಕ್ಕರ್ ತಗೊಂಡ್ ಹೋಗ್ತಿದ್ದ ಆತ. ಆದರೆ ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್, ಜಾತಿ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ
Sign in to your account
Username or Email Address


Password

 Remember Me


