ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ (Bengaluru Police) ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್‌ ಖಾತೆ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ@BlrCityPolice @DCPSouthBCP @tgpuraps Sir's the roosters ???? continue to croon day and night in residential area still, it had stopped for a while but started few weeks ago..pls take action as the resident won't listen to our plea to shift roosters to somewhere else.. https://t.co/6xdSUA42M8— Nemo (@Nemo_2ETR) December 16, 2022ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಮಗು ನಿದ್ರೆಯಿಂದ ಎದ್ದುಬಿಡ್ತಾನೆ.ಕೋಳಿ ಕೂಗೋದರಿಂದ ನಮಗೂ ನಿದ್ದೆ ಬರ್ತಿಲ್ಲ, ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರು ನೀಡಿ ಟ್ವೀಟ್‌ ಮಾಡಿರುವ ಆ ವ್ಯಕ್ತಿ, ಟ್ವಿಟ್ಟರ್‌ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ಟ್ಯಾಗ್‌ ಮಾಡಿ ದೂರಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು
Sign in to your account
Username or Email Address


Password

 Remember Me


