ಮೈಸೂರು: ಬೆತ್ತಲೆ ಫೋಟೋಗಳನ್ನು ಕಳುಹಿಸಿ ಯುವಕರು, ಪುರುಷರನ್ನು ಬುಟ್ಟಿಗೆ ಬೀಳಿಸಿ, ಬಳಿಕ ಅವರಿಂದ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಮಹಿಳೆಯನ್ನು (Woman) ಪೊಲೀಸರು ಬಂಧಿಸಿದ್ದಾರೆ.ಪಿರಿಯಾಪಟ್ಟಣ ತಾಲೂಕಿನ ಸವಿತ ಅಲಿಯಾಸ್ ಮಂಜುಳ ಯಾದವ್ ಅಮಾಯಕರಿಂದ ಲಕ್ಷ ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಳು. ಆಕೆ ಮೈಸೂರಿನಲ್ಲಿ (Mysuru) ಸೆಟಲ್ ಆಗಿ ಮಾಡುತ್ತಿದ್ದುದು ಮಾತ್ರ ಖತರ್ನಾಕ್ ಕೆಲಸಗಳನ್ನು. ಪುರುಷರಿಗೆ ತನ್ನ ಅರೆನಗ್ನ ಫೋಟೋಗಳನ್ನು ಕಳುಹಿಸಿ ಅವರನ್ನು ಬಲೆಗೆ ಬೀಳಿಸುತ್ತಿದ್ದಳು. ಇದನ್ನೂ ಓದಿ: 12 ಪೀಸ್‌ಗಳಾಗಿ ಬುಡಕಟ್ಟು ಮಹಿಳೆ ಮೃತದೇಹ ಪತ್ತೆ – ಪತಿ ಅರೆಸ್ಟ್ವರದಿಗಳ ಪ್ರಕಾರ ಸವಿತ ಮೈಸೂರಿನಲ್ಲಿ ತನ್ನ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷಗಟ್ಟಲೆ ಹಣವನ್ನು ಪೀಕಿದ್ದಳು. ದಂಪತಿ ಆಕೆಯ ಬಳಿ ಹಣ ಕೇಳಲು ಬಂದಾಗ ಹಲ್ಲೆ ಮಾಡಿದ್ದಾಳೆ ಎಂದು ದಂಪತಿ ಆರೋಪಿಸಿದ್ದಾರೆ. ಮಾತ್ರವಲ್ಲದೇ ಸಾಲ ಕೇಳಲು ಹೋದವರಿಗೆ ಬೆತ್ತಲೆ ಫೋಟೋ ಕಳುಹಿಸಿ ಬ್ಲಾಕ್‌ಮೇಲ್ (Blackmail) ಮಾಡುತ್ತಿದ್ದಳು. ಇದನ್ನೂ ಓದಿ: ಸಾಲ ತೀರಿಸದ್ದಕ್ಕೆ ಆಟೋ ಚಾಲಕನ ಪತ್ನಿಯನ್ನೇ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಸವಿತ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಈ ವೇಳೆ ಸವಿತ ಸಿಕ್ಕಿಬಿದ್ದಿದ್ದು, ಆಕೆಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
Sign in to your account
Username or Email Address


Password

 Remember Me


