ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾಧ್ಯಮವೊಂದರ ಜೊತೆ ಮಾತನಾಡಿ, ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತಾಡೋಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್. ನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕು. ನಾನಂತೂ ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ. ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಹಾಗಾಗಿ ಜನರು ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.
Sign in to your account
Username or Email Address


Password

 Remember Me


