ರಾಮನಗರ: ತೋಟದ ಮನೆಯಲ್ಲಿ ಇಟ್ಟಿದ್ದ ನಾಡಬಂದೂಕು ಹಿಡಿದು ಆಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ (Boy) ಮೃತಪಟ್ಟಿರುವ ಘಟನೆ ಕನಕಪುರ (Kanakapura) ತಾಲೂಕಿನ ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ನಡೆದಿದೆ.ಇಬ್ಬರು ಸಹೋದರರು ಆಟವಾಡುತ್ತಿದ್ದಾಗ ಸಾದಿಕ್ (16) ಎಂಬವನು ಬಂದೂಕಿನ ಟ್ರಿಗರ್ ಒತ್ತಿದ ಪರಿಣಾಮ ಗುಂಡು ತಗುಲಿ ಶಮಾ (7) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಡುಶಿವನಹಳ್ಳಿ ಮಲ್ಲೇಶ್ ಅವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬಂದ ಸಾದಿಕ್  ಪೋಷಕರು ಮಲ್ಲೇಶ್‌ನ ತೋಟದ ಮನೆಯಲ್ಲಿದ್ದರು. ಮೃತನ ತಂದೆ, ತಾಯಿ ತೋಟದ ಕೆಲಸದಲ್ಲಿ ನಿರತರಾಗಿದ್ದಾಗ, ಮಕ್ಕಳಾದ ಸಾದಿಕ್ ಮತ್ತು ಶಮಾ ಮನೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ತೋಟದ ಮನೆಯಲ್ಲಿದ್ದ ಬಂದೂಕನ್ನು ಕಂಡ ಮಕ್ಕಳು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿಇಬ್ಬರು ಆಟವಾಡುತ್ತಿದ್ದಾಗ ಸಾದಿಕ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಗುಂಡು ಶಮಾಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುರಕ್ಷತಾ ಕ್ರಮ ಪಾಲಿಸದೆ ಮನೆಯಲ್ಲಿ ಬಂದೂಕು ಇಟ್ಟಿದ್ದ ಮಾಲೀಕ ಮಲ್ಲೇಶ್‌ ಮೇಲೆ ನಿರ್ಲಕ್ಷ್ಯ ಆರೋಪ ಹಾಗೂ ಗುಂಡು ಹಾರಿಸಿದ ಸಾದಿಕ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:  ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು
Sign in to your account
Username or Email Address


Password

 Remember Me


