ಮಂಗಳೂರು: ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೋಷಕರು ಹಾಗೂ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಡಿಸೆಂಬರ್ 13 ರಂದು ಇಲ್ಲಿನ ಕರೆಕಾಡು ಪ್ರದೇಶದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಊರಿನವನಾಗಿದ್ದ ಯುವಕ ದಿನವೂ ಬಾಲಕಿಯನ್ನು ಬೈಕ್‌ನಲ್ಲಿ (Bike) ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ, ಅಲ್ಲದೇ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಜಮಾಲಿ ಗುಡ್ಡ ಚಿತ್ರದ ಟ್ರೇಲರ್ ರಿಲೀಸ್ : ಡಿಸೆಂಬರ್ 30ರಂದು ತೆರೆಗೆಬಾಲಕಿಯಿಂದ ವಿಷಯ ತಿಳಿದ ಪೋಷಕರು ಮರುದಿನ ಹಿಂಬಾಲಿಸಿ, ಕಿರುಕುಳ ನೀಡುತ್ತಿದ್ದ ವೇಳೆ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರೂ ಇದಕ್ಕೆ ಸಾಥ್ ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲುಸದ್ಯ ಆರೋಪಿ ಯುವಕನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪೋಕ್ಸೊ ಕೇಸ್ (POCSO Case) ದಾಖಲಾಗಿದೆ. ವಿಚಾರಣೆ ಬಳಿಕ ಆರೋಪಿಯ ಹೇಳಿಕೆ ಪಡೆದು ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಿಸಲಾಗಿದೆ.
Sign in to your account
Username or Email Address


Password

 Remember Me


