ಮೈಸೂರು: ಅಧಿಕಾರಿಗಳು ಬಾಡಿಗೆ ಕೇಳಿದ್ದೆ ಮಹಾ ಅಪರಾಧವೆಂಬಂತೆ ಮಹಿಳೆಯೊಬ್ಬರು ಮಚ್ಚು ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ಹಲ್ಲೆ ಮಾಡಲು ಮುಂದಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಮಚ್ಚು ತೋರಿಸಿ ಬೆದರಿಸಿದ ಮಹಿಳೆ ಹಾಗೂ ಆಕೆ ಪತಿ ಇಬ್ಬರು ಈಗ ಜೈಲು ಸೇರಿದ್ದಾರೆ.ಮೈಸೂರಿನ (Mysuru) ಕಾಂಗ್ರೆಸ್ ಮುಖಂಡ ಶಫಿ ಪತ್ನಿ ಸಯ್ಯದ್ ಮೈಬುನಿಸಾ ಅವರನ್ನು ಮೈಸೂರಿನ ಪೊಲೀಸರು ಕೊಡಗಿನ (Kodagu) ವಿರಾಜಪೇಟೆಯಲ್ಲಿ (Virajpet) ಬಂಧಿಸಿದ್ದಾರೆ. ಜೊತೆಗೆ ರೌಡಿಶೀಟರ್ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆಮೈಸೂರಿನ ಸಾತಗಳ್ಳಿಯ ಬಸ್ ಡಿಪೋ ಬಳಿ ಅಧಿಕಾರಿಗಳ ವಿರುದ್ಧ ಮಹಿಳೆ ಕೂಗಾಡಿದ್ದರು. ಅಧಿಕಾರಿಗಳು ಬಾಕಿ ಇದ್ದ ಬಾಡಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಕ್ಕೆ ಅವರ ವಿರುದ್ಧ ಕೂಗಾಡಿದ್ದಲ್ಲದೇ ಮಚ್ಚು ತೋರಿಸಿ ಬೆದರಿಕೆ ಕೂಡ ಹಾಕಿದ್ದರು.ಕಾಂಗ್ರೆಸ್ ಮುಖಂಡ ಶಫೀ ಅಹಮದ್ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಸ್ಥಳವನ್ನ 12 ವರ್ಷಗಳ ಅವಧಿಗೆ ಪರವಾನಗಿ ನೀಡಿ ಕರಾರು ಒಪ್ಪಂದ ಮಾಡಿಕೊಂಡಿದ್ದ. ಬಾಡಿಗೆ ಪಡೆದ ಮಳಿಗೆಗಳನ್ನ 6 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದ. ಅವರಿಂದ ಪ್ರತಿ ತಿಂಗಳು ತಪ್ಪದೆ ಬಾಡಿಗೆ ಪಡೆದಿದ್ದಾನೆ. ಆದರೆ ಶಫೀಕ್ ಅಹಮದ್ ಬಾಡಿಗೆಯನ್ನ ಸಾರಿಗೆ ಇಲಾಖೆಗೆ ಸರಿಯಾಗಿ ಪಾವತಿ ಮಾಡಿಲ್ಲ. ಒಂದಲ್ಲ ಎರೆಡಲ್ಲಾ ಬರೋಬ್ಬರಿ 1 ಕೋಟಿ 80 ಲಕ್ಷ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದ. ಈ ಸಂಬಂಧ ಸಾಕಷ್ಟು ಭಾರಿ ಅಧಿಕಾರಿಗಳು ಹೇಳಿದರೂ ಸ್ಪಂದಿಸಿಲ್ಲ. ಕಡೆಗೆ ಅಧಿಕಾರಿಗಳು ಕೋರ್ಟ್ ಮೂಲಕ ಕಾನೂನಾತ್ಮಕವಾಗಿ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ನೀಡಿದ್ದಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ಬಸ್ ಡಿಪೋ ಬಳಿ ಅಧಿಕಾರಿಗಳ ಜೊತೆ ಗಲಾಟೆ ಮಾಡಿದ್ದರು. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?ಮಚ್ಚನ್ನ ತೋರಿಸಿ ಅವಾಚ್ಯ ಶಬ್ಧಗಳಿಂದ ಅಧಿಕಾರಿಗಳನ್ನ ನಿಂದಿಸಿದ್ದರು. ಅಧಿಕಾರಿಗಳು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಾಗುತ್ತಿದಂತೆ ದಂಪತಿ ಪರಾರಿಯಾಗಿದ್ದರು. ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಘಟನೆ ನಡೆದು ಐದು ದಿನ ಬಳಿಕ ಈ ದಂಪತಿಯನ್ನು ಮೈಸೂರು ಪೊಲೀಸರು ಕೊಡಗಿನ ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ.
Sign in to your account
Username or Email Address


Password

 Remember Me


